ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS/ಕಾಪು: ಟೈಮಿಂಗ್ ವಿಚಾರಕ್ಕೆ ಎಕ್ಸ್‌ಪ್ರೆಸ್‌ ಬಸ್ ಚಾಲಕರ ರಂಪಾಟ – ಪ್ರಯಾಣಿಕರ ಎದುರೇ ವಾಗ್ವಾದ, ಕಠಿಣ ಕ್ರಮಕ್ಕೆ ಆಗ್ರಹ

COSTALNEWS/ಕಾಪು: ಟೈಮಿಂಗ್ ವಿಚಾರಕ್ಕೆ ಎಕ್ಸ್‌ಪ್ರೆಸ್‌ ಬಸ್ ಚಾಲಕರ ರಂಪಾಟ – ಪ್ರಯಾಣಿಕರ ಎದುರೇ ವಾಗ್ವಾದ, ಕಠಿಣ ಕ್ರಮಕ್ಕೆ ಆಗ್ರಹ

ಕಾಪು: ಟೈಮಿಂಗ್ ವಿಚಾರಕ್ಕೆ ಎಕ್ಸ್‌ಪ್ರೆಸ್‌ ಬಸ್ ಚಾಲಕರ ರಂಪಾಟ ಮುಂದುವರಿದಿದ್ದು ಸೋಮವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಸರ್ವಿಸ್ ರಸ್ತೆಯಲ್ಲಿ ಎರಡು ಎಕ್ಸ್ ಪ್ರೆಸ್ ಬಸ್ ಚಾಲಕರು ಪ್ರಯಾಣಿಕರ ಎದುರೇ ವಾಗ್ವಾದ ನಡೆಸಿದ ಘಟನೆ ನಡೆದಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಎರಡು ಎಕ್ಸ್‌ಪ್ರೆಸ್‌ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರ ನಡುವೆ ಟೈಮಿಂಗ್ ವಿಚಾರವಾಗಿ ಪ್ರಯಾಣಿಕರ ಎದುರಲ್ಲೇ ಬಸ್‌ನೊಳಗೆ ಆರಂಭವಾದ ಜಗಳ ಬಳಿಕ ರಸ್ತೆಗೆ ಬಂದು ಸಾರ್ವಜನಿಕರ ಎದುರು ತೀವ್ರ ವಾಗ್ವಾದಕ್ಕೆ ತಿರುಗಿತು. ಚಾಲಕರು ಬಸ್‌ಗಳನ್ನು ಸರ್ವಿಸ್ ರಸ್ತೆಯಲ್ಲೇ ನಿಲ್ಲಿಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸ್ಥಳೀಯರು ಮತ್ತು ರಿಕ್ಷಾ ಚಾಲಕರು ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರಾದರು ಸುಮಾರು 10 ನಿಮಿಷಗಳ ಕಾಲ ತಮ್ಮ ವಾಗ್ವಾದವನ್ನು ಮುಂದುವರಿಸಿದ್ದಾರೆ.

ಕಾಪು ಸರ್ವಿಸ್ ಬಸ್‌ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ಚಾಲಕರ ಈ ರೀತಿ ವರ್ತನೆ ನಿರಂತರವಾಗಿ ನಡೆಯುತ್ತಿದ್ದು ಎರಡು ವಾರದ ಹಿಂದೆ ಇಂತಹ ಘಟನೆ ನಡೆದಾಗ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದರು.
ಇದೀಗ ಮತ್ತೆ ಎರಡು ಬಸ್ ಚಾಲಕರು ಇದೇ ರೀತಿಯ ವರ್ತನೆಯನ್ನು ಮುಂದುವರಿಸಿದ್ದು ಅವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಮತ್ತು ಬಸ್‌ ಪ್ರಯಾಣಿಕರು ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article