udupi ಕುಂದಾಪುರ: ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಅಶಕ್ತ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಸೌಲಭ್ಯ
Wednesday, July 1, 2026
ಒಂದಾಗೋಣ ಎಂಬ ಧ್ಯೇಯ ವಾಕ್ಯದಂತೆ ಪ್ರಾರಂಭಿಸಿದ 2025 ಸಾಲಿನ ರೋಟರಿ ಕ್ಲಬ್ ವರ್ಷದ ಹರ್ಷದ ಯಶಸ್ವಿಗೆ ಕಾರಣರಾದ ಕೃಷ್ಣ ಪೂಜಾರಿಯವರಿಗೆ ರೋಟರಿ ಕ್ಲಬ್ ನ ಸರ್ವ ಸದಸ್ಯರ ಪರವಾಗಿ ಹಾರ್ದಿಕ ಶುಭಾಶಯಗಳು ಸಲ್ಲಿಸಿದರು
ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿ ರೋಟರಿಯ ಘನತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿರುವ ನಮ್ಮ ಹೆಮ್ಮೆಯ ಅಧ್ಯಕ್ಷರಾದ ಕೃಷ್ಣ ಪೂಜಾರಿ ಅವರು ಈ ದಿನ ಅವರ ಮಹತ್ವಾಕಾಂಕ್ಷೆ ಕಾರ್ಯಕ್ರಮದ ಅಂಗವಾಗಿ ಈ ವರ್ಷದ ಕೊನೆಯ ಕಾರ್ಯಕ್ರಮದ ಅಂಗವಾಗಿ ಗಂಗೊಳ್ಳಿ ದಾಕುಹಿತ್ಲು ನಿವಾಸಿಯಾದ ಶ್ರೀಮತಿ ಸವಿತಾ ಖಾರ್ವಿ ಇವರ ಮನೆಗೆ ವಿದ್ಯುತ್ ಪೂರೈಕೆಯ ವ್ಯವಸ್ಥೆಯನ್ನು ಮಾಡಿಕೊಟ್ಟು ಇದರ ಉದ್ಘಾಟನೆಯನ್ನು ನಮ್ಮ ಹಿರಿಯ ರೋಟರಿ ಮಿತ್ರರಾದ ರೋಟರಿ ಜನಾರ್ಧನ್ ಪೂಜಾರಿ ಯವರು ನೆರವೇರಿಸಿದರು
ಈ ಕಾರ್ಯಕ್ಕೆ ಸಹಕರಿಸಿದ ಹಿರಿಯ ರೋಟರಿ ಮಿತ್ರರಾದ ರೋ ಪ್ರದೀಪ್ DK ಹಾಗೂ ಜಗದೀಶ್ ಪೂಜಾರಿ ಅವರಿಗೆ ಸರ್ವ ಸದಸ್ಯರ ಪರವಾಗಿ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಾರ್ಡ್ ಸದಸ್ಯರಾದ ಶ್ರೀ ಗುರುರಾಜ್ ಖಾರ್ವಿ ಹಾಗೂ ರೋಟರಿ ಮಿತ್ರರು ಉಪಸ್ಥಿತರಿದ್ದು ಶುಭ ಹಾರೈಸಿದರು.