COSTALNEWS/ ಕಾಪು: ಟೈಮಿಂಗ್ ವಿಚಾರಕ್ಕೆ ಎರಡು ಬಸ್ ಸಿಬ್ಬಂದಿ ನಡುವೆ ಗಲಾಟೆ : ನಾಲ್ವರು ವಶಕ್ಕೆ…!!
Monday, July 27, 2026
ಕಾಪು: ಬಸ್ ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಎರಡು ಖಾಸಗಿ ಬಸ್‌ಗಳ ಚಾಲಕರು ಹಾಗೂ ಕಂಡಕ್ಟರ್‌ಗಳ ನಡುವೆ ಸಾರ್ವಜನಿಕ ಸ್ಥಳದಲ್ಲೇ ಗಲಾಟೆ ನಡೆದ ಘಟನೆ ಕಾಪು ಹೊಸ ಮಾರಿಗುಡಿ ಅಂಡರ್‌ಪಾಸ್ ಸಮೀಪ ಸೋಮವಾರ ಬೆಳಕಿಗೆ ಬಂದಿದೆ.
ಜುಲೈ 27, 2026ರಂದು ಬೆಳಿಗ್ಗೆ 9:27ರ ಸುಮಾರಿಗೆ ಕಾಪು ಪಡು ಗ್ರಾಮದ ಕಾಪು ಹೊಸ ಮಾರಿಗುಡಿ ಅಂಡರ್‌ಪಾಸ್ ಬಳಿಯ ಬಸ್ ನಿಲ್ದಾಣದ ಎದುರು KA-20-AB-5493 ನೋಂದಣಿಯ SANDESH ಬಸ್ ಹಾಗೂ KA-19-AE-1095 ನೋಂದಣಿಯ ANAND ಬಸ್‌ಗಳ ಚಾಲಕರು ಮತ್ತು ಕಂಡಕ್ಟರ್‌ಗಳು ಟೈಮಿಂಗ್ ವಿಚಾರಕ್ಕೆ ಪರಸ್ಪರ ಬಸ್ಸುಗಳನ್ನು ತಾಗಿಸಿಕೊಂಡು, ಕೈ-ಕೈ ಮಿಲಾಯಿಸಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟುಪಡಿಸಿರುವುದಾಗಿ ಆರೋಪಿಸಲಾಗಿದೆ.
ಘಟನೆಯ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ರಮೇಶ್, ಅಭಿಷೇಕ್ (ಬಸ್ ಚಾಲಕರು), ವಿಜಯಕುಮಾರ್ ಹಾಗೂ ಹರೀಶ್ ಬಿ. ಹೆಗ್ಡೆ (ಬಸ್ ಕಂಡಕ್ಟರ್) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯಲ್ಲಿ ಭಾಗಿಯಾಗಿದ್ದ ಎರಡು ಬಸ್‌ಗಳನ್ನೂ ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಕಾಪು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಪ್ರತಿ ದಿನ ಮಂಗಳೂರು ಉಡುಪಿ ಕುಂದಾಪುರ ಬೈಂದೂರು ಭಾಗದಲ್ಲಿ ಚಾಲಕರು ಮತ್ತು ಕಂಡಕ್ಟರ್ ನಡುವಿನ ಜಗಳ ಸಾರ್ವಜನಿಕ ವಲಯದಲ್ಲಿ ಖಾಸಗಿ ಬಸ್ ಚಾಲಕರು ಮತ್ತು ಕಂಡಕ್ಟರ್ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.
ಇಂತಹ ಪ್ರಕರಣಗಳು ನಡೆಯದಂತೆ ಪೋಲಿಸ್ ಇಲಾಖೆ ಹಾಗೂ ಸಂಚಾರಿ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ