ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS | BIG BREAKING. ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣಿಗೇರಿ ಎಂಬಲ್ಲಿ ರಸ್ತೆಗಾಗಿ ಜಗಳ..!

COSTALNEWS | BIG BREAKING. ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣಿಗೇರಿ ಎಂಬಲ್ಲಿ ರಸ್ತೆಗಾಗಿ ಜಗಳ..!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ,ಗುಜ್ಜಾಡಿ ಗ್ರಾಮದ ಬೆಣಿಗೇರಿ ಪ್ರದೇಶದಲ್ಲಿ ರಸ್ತೆ ಹಕ್ಕು ವಿಚಾರವಾಗಿ ಎರಡು ಮನೆಯ ಕುಟುಂಬದವರ ನಡುವೆ ಉಂಟಾದ ವಿವಾದ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ಘಟನೆ ಈ ಹಿಂದೆಯೂ ಎರಡು ಬಾರಿ ಗಲಾಟೆ ಆಗಿ ಗಂಗೊಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿ ಇವಾಗ ನ್ಯಾಯಾಲಯದಲ್ಲಿ ಎರಡು ಕುಟುಂಬದ ಮನೆಯವರು ಹೋರಾಟ ನಡೆಯುತ್ತಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ನೋಡಲ್ ಅಧಿಕಾರಿ ಸೇರಿದಂತೆ ಸಿಬ್ಬಂದಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿ (VA) ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಎರಡೂ ಮನೆಯವರ ವಾದ- ಪ್ರತಿವಾದಗಳನ್ನು ಆಲಿಸಿದ ಅಧಿಕಾರಿಗಳು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.
ಇದೇ ವೇಳೆ, ಜಾಗದ ಅಧಿಕೃತ ಸರ್ವೆ ಪೂರ್ಣಗೊಳ್ಳುವ ತನಕ ಯಥಾಸ್ಥಿತಿ ಕಾಪಾಡುವಂತೆ ಅಧಿಕಾರಿಗಳು ಆದೇಶಿಸಿದ್ದು, ಯಾರೂ ರಸ್ತೆಯಲ್ಲಿ ಹೊಸ ಕಾಮಗಾರಿ ಅಥವಾ ಬದಲಾವಣೆ ಮಾಡಬಾರದು ಎಂದು ಸೂಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಜಾಗದ ಗಡಿ ಕುರಿತು ಪರಿಶೀಲನೆ ನಡೆಸಿ, ಸರ್ವೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಈ ಪ್ರಕರಣದ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಸ್ಥಳೀಯರಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ. ಸತ್ಯಾಸತ್ಯತೆ ಏನು ಎಂಬುದು ಸರ್ವೆ ವರದಿ ಮತ್ತು ಅಧಿಕಾರಿಗಳ ಅಂತಿಮ ತೀರ್ಮಾನದ ಬಳಿಕವೇ ಸ್ಪಷ್ಟವಾಗಲಿದೆ.


Ads on article

Advertise in articles 1

advertising articles 2

Advertise under the article