ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

UK ಶಿರಸಿ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ವೇಳೆ ಆಡಳಿತ ಮಂಡಳಿಯಿಂದ ಬಂಗ್ಲೆ ದಂಪತಿಗೆ ಸನ್ಮಾನ

UK ಶಿರಸಿ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ವೇಳೆ ಆಡಳಿತ ಮಂಡಳಿಯಿಂದ ಬಂಗ್ಲೆ ದಂಪತಿಗೆ ಸನ್ಮಾನ


ಶಿರಸಿಯ ಪ್ರಸಿದ್ಧ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ (ರಿ), ಬೆಂಗಳೂರು ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಂಗ್ಲೆ ಹಾಗೂ ಅವರ ಪತ್ನಿಯನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭ ಶಿರಸಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಶಿರಸಿ ತಾಲೂಕು ಅಧ್ಯಕ್ಷರಾದ ರಾಜೇಶ್ ಕಾರ್ಯದರ್ಶಿಗಳಾದ ಆನಂದಶೆಟ್ಟಿ ಹಾಗೂ ಅನೇಕ ಪದಾಧಿಕಾರಿಗಳ ಪ್ರೀತಿ ವಿಶ್ವಾಸ ಹಾಗೂ ಸಹಕಾರದಿಂದ ಆಗಮಿಸಿದಂತ ದಂಪತಿಗಳಿಗೆ ಗುರುವಾರ ವಿಶೇಷ ಪೂಜೆಯೊಂದಿಗೆ ದೇವಿಯ ಶ್ರೀ ಮಾರಿಕಾಂಬ ಟ್ರಸ್ಟ್ ವತಿಯಿಂದ ಸನ್ಮಾನದ ಜೊತೆಗೆ ದೇವಿಯ ಪೋಟೋವನ್ನು ಕಾಣಿಕೆಯಾಗಿ ಮಾರಿಕಾಂಬೆ ದೇವಸ್ಥಾನದ ವ್ಯವಸ್ಥಾಪಕರು ನೀಡಿದರು
ಜೊತೆಗೆ ಬಂದಂತ ಪ್ರತಿಯೊಬ್ಬ ಪತ್ರಕರ್ತರಿಗೂ ಕಷಾಯ ನೀಡುವುದರೊಂದಿಗೆ ಆತಿಥ್ಯ ನೀಡಲಾಗಿತ್ತು.
ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದು, ದೇವಿಯ ಆಶೀರ್ವಾದದ ಸ್ಮರಣಿಕೆಯೊಂದಿಗೆ ಬಂಗ್ಲೆ ದಂಪತಿಯನ್ನು ಗೌರವಿಸಿದರು. ಧಾರ್ಮಿಕ, ಸಾಮಾಜಿಕ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಮೆಚ್ಚಿ ಈ ಸನ್ಮಾನ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಊರಿನ ಮುಖಂಡರು ಹಾಜರಿದ್ದರು

Ads on article

Advertise in articles 1

advertising articles 2

Advertise under the article