ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

udupi ಕುಂದಾಪುರ: ಮೆಸ್ಕಾಂ ಖಾಸಗೀಕರಣ ವಿರೋಧಿಸಿ ಜಯಪ್ರಕಾಶ ಹೆಗ್ಡೆಯವರಿಗೆ ಮನವಿ

udupi ಕುಂದಾಪುರ: ಮೆಸ್ಕಾಂ ಖಾಸಗೀಕರಣ ವಿರೋಧಿಸಿ ಜಯಪ್ರಕಾಶ ಹೆಗ್ಡೆಯವರಿಗೆ ಮನವಿ


ಕುಂದಾಪುರ: ಮೆಸ್ಕಾಂ ಸಿಬ್ಬಂದಿಗಳು ಇಂದು ಮಾಜಿ ಲೋಕಸಭಾ ಸದಸ್ಯರು ಹಾಗೂ ಮಾಜಿ ಸಚಿವರಾದ ಕೆ ಜಯಪ್ರಕಾಶ ಹೆಗ್ಡೆ ಭೇಟಿ ಮಾಡಿ ಮೆಸ್ಕಾಂ ನೌಕರರ ಸಂಘದ ವತಿಯಿಂದ ಖಾಸಗಿಕರಣದ ಕುರಿತಂತೆ ಮಾಹಿತಿಯನ್ನು ನೀಡಿ ಸರಕಾರಕ್ಕೆ ಆಕ್ಷೇಪಣ ಪತ್ರವನ್ನು ನೀಡುವಂತೆ ಮನವಿ ನೀಡಲಾಯಿತು. 
ಈ ಸಂದರ್ಭದಲ್ಲಿ ಶ್ರೀ ಕೆ ಜಯಪ್ರಕಾಶ ಹೆಗ್ಡೆಯವರು ಮಾತನಾಡಿ ಇಂಧನ ಸಚಿವರಿಗೆ ಮತ್ತು ಮಾನ್ಯ ಮುಖ್ಯಮಂತ್ರಿಗಳ ಜೊತೆ ಖುದ್ದಾಗಿ ಚರ್ಚಿಸುವುದಾಗಿ ಹೇಳಿದರು.
ನೌಕರರ ಸಂಘದ ಉಡುಪಿಯ ಎನ್ ನವಿನ್ ಕುಮಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬ್ರಹ್ಮಾವಾರ ಸತೀಶ ಹೆಚ್ , ಎಸಿ ಎಸ್ ಟಿ ಕಲ್ಯಾಣ ಸಂಸ್ಥೆಯ ಸುರೇಶ ಬಾಬು,ಚಂದ್ರಶೇಖರ ರಾತೋಡ್,ಕೋಟ ವಿಭಾಗದ ನೌಕರರ ಸಂಘದ ಅಧ್ಯಕ್ಷ ದಿನೇಶ ಪುತ್ರನ್ ವಿಠಲವಾಡಿ, ಬ್ರಹ್ಮಾವಾರ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ ಶೆಟ್ಟಿಗಾರ ಕಾರ್ಯದರ್ಶಿ ವೈ ಸಂತೋಷ ಕುಮಾರ,ಮೇಲ್ವಿಚಾರಕ ಸಂತೋಷ ದೇವಾಡಿಗಾ,ಹಾಗೂ ನೌಕರರ ಸಂಘದ ಸದಸ್ಯರು ಉಪಸ್ಥಿತಿತರಿದ್ದರು.


Ads on article

Advertise in articles 1

advertising articles 2

Advertise under the article