ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

kundapura ಬೈಂದೂರು: ಹಿರಿಯ ಪತ್ರಕರ್ತ ಎಸ್.ಜನಾರ್ಧನ ಮರವಂತೆ ನಿಧನ

kundapura ಬೈಂದೂರು: ಹಿರಿಯ ಪತ್ರಕರ್ತ ಎಸ್.ಜನಾರ್ಧನ ಮರವಂತೆ ನಿಧನ

ಬೈಂದೂರು: ರಾಜ್ಯದ ಹಿರಿಯ ಪಂಚಾಯತ್‌ರಾಜ್ ಸಂಪನ್ಮೂಲ ವ್ಯಕ್ತಿ,ನಿವೃತ್ತ ಶಿಕ್ಷಕ,ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ,ಸಾಹಿತಿ ಎಸ್.ಜನಾರ್ಧನ ಮರವಂತೆ (88) ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ.ಮೃತರು ಹಿರಿಯ ಪತ್ರಕರ್ತರು, ಮರವಂತೆ ಗ್ರಾ.ಪಂ ಅಧ್ಯಕ್ಷರಾಗಿ ಮಾದರಿ ಗ್ರಾಮ ಪಂಚಾಯತ್ ಆಗಿ ರೂಪಿಸಿರುವ ಜೊತೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದ್ದಾರೆ.ಬೈಂದೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ,ಪಂಚಾಯತ್‌ರಾಜ್‌ನ ಹಿರಿಯ ಅನುಭವಿ.ಸಹಕಾರಿ ದುರೀಣ,ಅಜಾತಶತ್ರುವಾಗಿದ್ದು ಇಳಿವಯಸ್ಸಿನವರಾಗಿ ಅತ್ಯಂತ ಕ್ರಿಯಾಶೀಲರಾಗಿದ್ದರು.ಇತ್ತೀಚೆಗೆ ಕೆಲವು ಸಮಯದಿಂದ ವಯೋಸಹಜ ಬಳಲಿಕೆ ಕಂಡುಬಂದಿದ್ದು ಶುಕ್ರವಾರ ಕುಂದಾಪುರ ಆಸ್ಪತ್ರೆಗೆ ಕೊಂಡೊಯ್ದದ್ದು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಭಾನುವಾರ ಸಾರ್ವಜನಿಕ ದರ್ಶನ: 
ಮೃತರ ಪಾರ್ಥಿವ ಶರೀರ ಭಾನುವಾರ ಪೂರ್ವಾಹ್ನ ೮ ಗಂಟೆಗೆ ಮರವಂತೆ ಸಾಧನಾ ಸಭಾಭವನದಲ್ಲಿ ತರಲಿದ್ದು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Ads on article

Advertise in articles 1

advertising articles 2

Advertise under the article