baindur ಶಿರೂರು : ಪರಿಸರ ಕಾಳಜಿ ಅತೀ ಅಗತ್ಯ - ಜ್ಞಾನದಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾl ರವಿದಾಸ್ ಶೆಟ್ಟಿ
Saturday, June 6, 2026
ಬೈಂದೂರು: ಜ್ಞಾನದ ಶೈಕ್ಷಣಿಕ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸುವುದರಿಂದ
ಇಂದಿನ ಪ್ರಚಲಿತ ಕಾಲಘಟ್ಟದಲ್ಲಿ ಪರಿಸರ ಉಳಿದರೆ ಮನುಕುಲದ ಉಳಿವು, ಪ್ರಕೃತಿ ವಿನಾಶದತ್ತ ಸಾಗಿದರೆ ಮನುಕುಲದ ರಕ್ಷಣೆ ಅಸಾಧ್ಯ, ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಇದನ್ನು ನಮಗೆಲ್ಲ ನೆನಪಿಸುವ ದಿನವೇ
*ವಿಶ್ವ ಪರಿಸರ ದಿನ* ಪರಿಸರ ಸಂರಕ್ಷಣೆಗೆ ನಾವು ಸ್ವಯಂ ಪ್ರೇರಿತರಾಗಿ ಗಿಡ ನೆಟ್ಟು ನೀರು ಹಾಕಿ ಅವುಗಳನ್ನು ಬೆಳೆಸಿ ನಮ್ಮ ತಾಯಿಯಂತೆ ಆರೈಕೆ ಮಾಡಬೇಕು ಪರಿಸರದ ಮೌಲ್ಯಗಳನ್ನು ಎಲ್ಲರೂ ಅರಿತುಕೊಂಡು ಮಲೀನ ಮಾಡದಂತೆ ಸಂರಕ್ಷಣೆ ಮಾಡುವತ್ತ ಶ್ರಮವಹಿಸಬೇಕು ಎಂದು ಜ್ಞಾನದಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ಹೇಳಿದರು ಸಾಂಕೇತಿಕವಾಗಿ ಗಿಡ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕುಮಾರಿ ಪ್ರಣೀತಾ ವಿಶ್ವ ಪರಿಸರ ದಿನಾಚರಣೆ ಕುರಿತು ಮನೋಜ್ಞವಾಗಿ ಮಾತನಾಡಿ ಇಂದಿನ ದಿನಗಳಲ್ಲಿ ಪರಿಸರ ನಾಶವಾಗುತ್ತಿದ್ದು ಇದರ ಪರಿಣಾಮವಾಗಿ ಕಾಲಕಾಲಕ್ಕೆ
ಮಳೆಯಿಲ್ಲದೆ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಕೃಷಿಕರು ಕೃಷಿಯಿಂದ ವಂಚಿತರಾಗುತ್ತಿದ್ದಾರೆ ಹೀಗಾಗಿ ಇಂದಿನ ದಿನಗಳಲ್ಲಿ ಪರಿಸರ ಉಳಿಸುವ ಹೊಣೆ ನಮ್ಮದಾಗಿದ್ದು ಶಾಲಾ ಹಂತದಲ್ಲಿ ಪರಿಸರ ಪ್ರೀತಿ ಬೆಳೆಸಿಕೊಂಡು ಶಿಕ್ಷಣದ ಜೊತೆಗೆ ಪರಿಸರದ ಕಾಳಜಿ ರೂಡಿಸಿಕೊಂಡರೆ ಹಸಿರು ಕರ್ನಾಟಕದ ಕನಸು ನನಸಾಗುತ್ತದೆ ಎಂದರು ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಜೆ ಸಿ ಐ ಶಿರೂರು ಇದರ ಪದಾಧಿಕಾರಿಗಳು
ಶಾಲೆಗೆ ಗಿಡಗಳನ್ನು ವಿತರಿಸಿದರು
ವಿದ್ಯಾರ್ಥಿಗಳಾದ ಕುಮಾರಿ ಮೇಘನಾ ಸ್ವಾಗತಿಸಿ ಕುಮಾರಿ ಧನ್ವಿ ವಂದಿಸಿದರು ಹಾಗೂ ಕುಮಾರಿ ಅಂಜಲಿ ಕಾರ್ಯಕ್ರಮ ನಿರೂಪಿಸಿದರು