Kundapura 🤔*"HIGHTECH👹ವೈಶ್ಯಾವಾಟಿಕೆ ದಂಧೆ"🤭
Friday, June 12, 2026
ಕುಂದಾಪುರ
ಬುಟ್ಟಿಯಲ್ಲಿರುವ ಎಲ್ಲಾ ಹಣ್ಣುಗಳು ಚೆನ್ನಾಗಿರೋಲ್ಲ. ಅದರಲ್ಲಿ ಕೆಲವೊಂದು ಕೊಳೆತವೂ ಇರುತ್ತವೆ. ಹಾಗೆಯೇ ಸಮಾಜದಲ್ಲಿ ಕೆಲವು ಕಚಡಾ ತಲೆಮಾಸಿದೋರೂ ಇರುತ್ತಾರೆ. ಇಂತಹ ಅಥವಾ, ಇದಕ್ಕಿಂತ ತೀರಾ ಕೆಟ್ಟ ಜೀವನಶೈಲಿಯ ವ್ಯವಸ್ಥೆಗಳು ಮೊದಲೂ ಇತ್ತು , ಇಂದೂ ಇದೆ, ಮುಂದೆನೂ ಇರುತ್ತೆ. ಅದೊಂಥರಾ ಸಾಂಕ್ರಾಮಿಕ ರೋಗ ಇದ್ದಂತೆ. ಒಮ್ಮೆ ಮುಗೀತು ಅಂತ ಅಂದುಕೊಳ್ಳುತ್ತಿರುವಂತೆ ಬೇರೆ ಬೇರೆ Varient ನಲ್ಲಿ ಪ್ರಕಟವಾಗ್ತಾ ಇದೆ. ಮೊದಲು ಇದು ತುಂಬಾ ಗುಟ್ಟಾಗಿ ನಡೀತಿತ್ತು, ಅದರಿಂದ ಸಮಾಜಕ್ಕೆ ಅಷ್ಟೊಂದು ನಷ್ಟ ಆಗ್ತಿರ್ಲಿಲ್ಲ. ಆದರಿಂದು, ಅದು ನಾಚಿಕೆ-ಮಾನ- ಮರ್ಯಾದೆ ಬಿಟ್ಟು, ಯಾವುದೇ ಅಂಜಿಕೆ ಇಲ್ಲದೆ, ಸಂಕೋಚ ಇಲ್ಲದೆ TV, What's app, ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಪ್ರಕಟವಾಗಿ, ಗೊತ್ತಿಲ್ಲದವರಿಗೂ ಗೊತ್ತಾಗುವಂತೆ ಮಾಡುತ್ತಿದ್ದಾರೆ. ಈಗ ಅಶ್ಲೀಲ ಅನ್ನೋದು ಇಲ್ಲ. ತಾವು ಮಾಡಿದ್ದೇ ಸರಿ ಎಂಬ ಧೋರಣೆ ಎಲ್ಲರಲ್ಲಿದೆ. ಈ ರೀತಿ ಪಬ್ಲಿಕ್ ನಲ್ಲಿ ರೀಲ್ಸ್, ವಿಡಿಯೋ ಮಾಡಿ ಹಾಕೋರಿಗೆ ನಾಚಿಕೆ
ಆಗಬೇಕು. ಇವರು ಸ್ವಸ್ಥ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಇದು ನಿಲ್ಲಬೇಕು. ಸರಿ, ತಮಗೆ ಏನು ಬೇಕಾದರೂ ಮಾಡುವ ಸ್ವಾತಂತ್ರ್ಯ ಇದೆ ಅಂತ ಮನಸ್ಸಿಗೆ ಬಂದ ಹಾಗೆ ಮಾಡೋಕಾಗಲ್ಲ. ಏನಾದ್ರೂ ಪ್ರಕಟಮಾಡಬೇಕಿದ್ರೆ, ಆ ಪ್ರಕಟಣೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಿರಬೇಕು. ಕೆಟ್ಟ Message ನ್ನು Create ಮಾಡೋರಿಗೆ ಜನರು ಛೀ, ಥು, ಅಂತ ಉಗಿಯೋವರೆಗೂ ಅದು ಮೆರೆಯುತ್ತಿರುತ್ತದೆ. ಇಂತಹ ಸಮಾಜ ಘಾತಕ "ರೀಲ್ಸ್, ವಿಡಿಯೋ, ಲೇಖನ, ಪೋಸ್ಟರ್" ಗಳನ್ನು ಬ್ಯಾನ್ ಮಾಡಬೇಕು. ಏನಂತೀರಿ?
🙏 ✍️ 12-06-26
*ನಂದಾ ಕುಂದಾಪುರ*🙏