ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Sirasi ಕಳೆದುಕೊಂಡಿದ್ದ ಬಂಗಾರದ ಸರ ಪತ್ತೆ ಹಚ್ಚಿ ವಾರಿಸುದಾರರಿಗೆ ಹುಡುಕಿಕೊಟ್ಟ ಸಿದ್ದಾಪುರ ಪೊಲೀಸರು

Sirasi ಕಳೆದುಕೊಂಡಿದ್ದ ಬಂಗಾರದ ಸರ ಪತ್ತೆ ಹಚ್ಚಿ ವಾರಿಸುದಾರರಿಗೆ ಹುಡುಕಿಕೊಟ್ಟ ಸಿದ್ದಾಪುರ ಪೊಲೀಸರು

ಶಿರಸಿ: ಸಿದ್ದಾಪುರತಾಲೂಕಿನ ನೆಲ್ಲಿಕೊಪ್ಪ ಗ್ರಾಮದ ಚೌಡಮ್ಮ ಜಟ್ಯಾ ಮಡಿವಾಳ (75)ರವರು ದಿನಾಂಕ 3/5/2026 ರಂದು ಮಧ್ಯಾಹ್ನ ಸುಮಾರು 4,50,000/-ರೂ ಬೆಲೆಬಾಳುವ ಅಂದಾಜು 38 ಗ್ರಾಂ ತೂಕದ ಬಂಗಾರದ ಸರವನ್ನು ಕಳೆದುಕೊಂಡಿದ್ದರು.
ತುರ್ತು ಕಾರ್ಯಪ್ರವೃತ್ತರಾದ ಸಿದ್ದಾಪುರ ಠಾಣೆಯ ಪೊಲೀಸರು
ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್,ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿಗಳಾದ ಜಿ ಕೃಷ್ಣಮೂರ್ತಿ ಹಾಗೂ ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಮತಿ ಗೀತಾ ಪಾಟೀಲ್, ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಜೆ.ಬಿ ಸೀತಾರಾಮ ರವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಠಾಣೆಯ ತನಿಖಾ ವಿಭಾಗದ ಪಿಎಸ್ಐ ನಾಗಪ್ಪ ಬಿ ಹಾಗೂ ಶಾಂತಿನಾಥ ಪಾಸಾನೆ ಪಿಎಸ್ಐ ಗಳ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಣಿಕಂಠ,ಸಂದೀಪ್ ನಾಯ್ಕ,ಗಿರೀಶಯ್ಯ,ಮೋಹನ ಗಾವಡಿ,ಚೇತನ ಹಲಗೇರಿ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಕಳೆದುಕೊಂಡಿದ್ದ ಬಂಗಾರದ ಸರವನ್ನು ಹುಡುಕಿಕೊಡುವಲ್ಲಿ ಯಶಸ್ವಿಯಾಗಿದ್ದು,ಇಂದು ಬಂಗಾರದ ಸರವನ್ನು ಪೊಲೀಸ್ ನಿರೀಕ್ಷಕರಾದ ಜೆ.ಬಿ ಸೀತಾರಾಮರವರು ವಾರಸುದಾರರಿಗೆ ಹಸ್ತಾಂತರಿಸಿದರು,ನೊಂದ ಕುಟುಂಬದ ಸದಸ್ಯ ಕುಮಾರಗೌಡರವರು ಪೊಲೀಸರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article