Udupi ಕುಂದಾಪುರ; ನಾಯಕವಾಡಿ ಯಲ್ಲಿ ಸುವರ್ಣ ಸಂಭ್ರಮ ಜಿಲ್ಲಾ ಮಟ್ಟದ ಕುಣಿತ ಭಜನ ಸ್ಪರ್ಧೆ: ಕಾರ್ಕಳ ತಂಡಕ್ಕೆ ಪ್ರಥಮ ಸ್ಥಾನ
Saturday, April 4, 2026
ಕುಂದಾಪುರ: ತಾಲೂಕಿನ ಗುಜ್ಜಾಡಿ ಗ್ರಾಮದ ಶ್ರೀ ರಾಮ್ ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರು ರಾಮಮಂದಿರದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮವನ್ನು ದೇವಸ್ಥಾನದ ಗೌರವಾಧ್ಯಕ್ಷ ನಾರಾಯಣ್ ಟಿ ಪೂಜಾರಿ ಯವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು ಹಾಗೂ ಧಾರ್ಮಿಕ ಕಟ್ಟುಪಾಡಿನ ಸೇವಾ ಕ್ಷೇತ್ರದಲ್ಲಿ ಭಜನೆ ಎನ್ನುವುದು ಅರ್ಥಪೂರ್ಣ ಸಂಗತಿ ಇಂತಹ ಕಾರ್ಯಕ್ರಮದಿಂದ ನಡೆಯುತ್ತಿರುವ ನಮ್ಮ ಸುವರ್ಣ ಸಂಭ್ರಮ ಕಾರ್ಯಕ್ರಮ ಇನ್ನಷ್ಟು ಮೆರುಗು ತಂದಿದೆ ಎಂದು ಹೇಳಿದರು
ಕುಣಿತ ಭಜನಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಪುರುಷರು ಮಹಿಳೆಯರು ಸೇರಿದಂತೆ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು
ಪ್ರಥಮ ಸ್ಥಾನ* : ಸೇವಾ ಭಾರತಿ ಭಜನಾ ಮಂಡಳಿ, ಕಾರ್ಕಳ.
*ತೃತೀಯ ಸ್ಥಾನ:* ಶ್ರೀದೇವಿ ಭಜನಾ ಮಂಡಳಿ, ನೀರ ಬೈಲೂರು ಕಾರ್ಕಳ.
ಹೌದು, ಈ ಕಾರ್ಯಕ್ರಮದ ಅನುಭವಿ ತೀರ್ಪುಗಾರರಾದ ಚಂದ್ರಶೇಖರ್ ಶೆಟ್ಟಿ ಯಳೂರು ಹಕ್ಲಾಡಿ, ಅರುಣ್ ಕುಂದಾರ್ ಕಲ್ಯಾಣಪುರ, ಮತ್ತು ದಿನೇಶ್ ಹೆಚ್. ಸುವರ್ಣ ಬಿಜಾಡಿ ಅವರುಗಳು ಸ್ಪರ್ಧೆಯ ನಿಖರ ಮತ್ತು ಪಾರದರ್ಶಕ ಫಲಿತಾಂಶವನ್ನು ನೀಡುವ ಮೂಲಕ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದರು.
ಶ್ರೀ ರಾಮ್ ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರು ರಾಮಮಂದಿರ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಶ್ರೀರಾಮ ಭಕ್ತರಲ್ಲಿ ಭಕ್ತಿಯ ಸಾಗರವಾಗಿದೆ ಹಾಗೂ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಗಂಗೊಳ್ಳಿ ವಲಯ ಮಟ್ಟದ ಭಜನಾ ಮಂಡಳಿಯ ಅಧ್ಯಕ್ಷ ಜಗದೀಶ್ ಪೂಜಾರಿ ಯಾನೆ (ಜಗ್ಗ ) ಹಾಗೂ ವಲಯದ ಸಂಚಾಲಕರಾಗಿ ಜೋಗ ಪೂಜಾರಿ ಬಿಲ್ಲವ ಸಮಾಜ ಸೇವೆ ಸಂಘದ ಅಧ್ಯಕ್ಷರು ರಾಜೇಶ್( ರಾಮ) ಪೂಜಾರಿ ಮಹಿಳಾ ಮಂಡಳಿ ಅಧ್ಯಕ್ಷರು ಸರೋಜಾ ಪೂಜಾರಿ ಭಜನ ಮಂಡಳಿಯ ಸದಸ್ಯರು ಸೇರಿದಂತೆ ವಾಸುದೇವ ಖಾರ್ವಿ
ನವೋದಯ ಪ್ರೇರಕರು.
ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಕೊಡಿಯಲ್ ಬೈಲ್ ಮಂಗಳೂರು. ಹಾಜರಿದ್ದರು
ಒಟ್ಟಾರೆಯಾಗಿ ಭಜನಾ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು ಸುವರ್ಣ ಸಂಭ್ರಮ ಸುವರ್ಣ ಸಂಭ್ರಮ ಕಾರ್ಯಕ್ರಮದ ಸೀತಾರಾಮ ಚಂದ್ರ ಕಲ್ಯಾಣೋತ್ಸವದ ಮೆರುಗು ಇನ್ನಷ್ಟು ಹೆಚ್ಚಾಗಿದೆ .
ಏಪ್ರಿಲ್ 5 ರಂದು ಸೀತಾರಾಮ ಚಂದ್ರ ಕಲ್ಯಾಣೋತ್ಸವ ಜರುಗಲಿದೆ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಗೌರವಾಧ್ಯಕ್ಷರು ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು ಸಾರ್ವಜನಿಕ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ
ವರದಿ: ದಾಮೋದರ ಮೊಗವೀರ ನಾಯಕವಾಡಿ COSTALNEWS ಕುಂದಾಪುರ