Mangalore 16 ವರ್ಷದ ಬಾಲಕಿ ನಾಪತ್ತೆ : ಪೊಲೀಸರಿಂದ ಲುಕ್‌ಔಟ್ ನೋಟಿಸ್ ಜಾರಿ
Saturday, April 18, 2026
ಮಂಗಳೂರು : ಕೊಣಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು ಅಡ್ಕದ ನಿವಾಸಿಯಾದ 16 ವರ್ಷದ ಬಾಲಕಿಯೊಬ್ಬಳು ಏಪ್ರಿಲ್ 12 ರಿಂದ ನಾಪತ್ತೆಯಾಗಿದ್ದಾಳೆ.
ನಾಪತ್ತೆಯಾದ ಬಾಲಕಿಯನ್ನು ಜಗದೀಶ್ ಪೂಜಾರಿ ಮತ್ತು ಗುಲಾಬಿ ದಂಪತಿಯ ಪುತ್ರಿ ಚೈತನ್ಯ ಎಂದು ಗುರುತಿಸಲಾಗಿದೆ.
ಹರೇಕಳದ ರಾಮಕೃಷ್ಣ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಈಕೆ, ಇತ್ತೀಚೆಗಷ್ಟೇ ಪರೀಕ್ಷೆ ಮುಗಿಸಿ ಮನೆಯಲ್ಲಿದ್ದಳು.
ಬಾಲಕಿಯ ತಾಯಿ ಗುಲಾಬಿ ಅವರು ನೀಡಿದ ದೂರಿನ ಪ್ರಕಾರ, ಏಪ್ರಿಲ್ 12 ರಂದು ಬೆಳಿಗ್ಗೆ ಸುಮಾರು 7:30 ಕ್ಕೆ ಸ್ನೇಹಿತರೊಂದಿಗೆ ಪೊಳಲಿ ದೇವಸ್ಥಾನಕ್ಕೆ ಹೋಗುವುದಾಗಿ ತಂದೆಗೆ ತಿಳಿಸಿ ಚೈತನ್ಯ ಮನೆಯಿಂದ ಹೊರಟಿದ್ದಳು.
ಆದರೆ, ಸಂಜೆಯಾದರೂ ಆಕೆ ಮನೆಗೆ ಮರಳಿಲ್ಲ. ಸಂಬಂಧಿಕರ ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಕಾರಣ, ಅಂತಿಮವಾಗಿ ಪೊಲೀಸ್ ದೂರು ದಾಖಲಿಸಲಾಗಿದೆ.