ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Bhatkal ಭಟ್ಕಳದ ಸಂಶನೂರು ಆಸ್ಪತ್ರೆಯಲ್ಲಿ ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆದ ಮುರುಡೇಶ್ವರ ಸಮೀಪದ ಮಹಿಳೆ ಅನುಮಾನಾಸ್ಪದ ಸಾವು..!

Bhatkal ಭಟ್ಕಳದ ಸಂಶನೂರು ಆಸ್ಪತ್ರೆಯಲ್ಲಿ ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆದ ಮುರುಡೇಶ್ವರ ಸಮೀಪದ ಮಹಿಳೆ ಅನುಮಾನಾಸ್ಪದ ಸಾವು..!

ಭಟ್ಕಳ: ಮುರುಡೇಶ್ವರ ಸಮೀಪದ ಮುಡಶಿರಾಲಿ ಗ್ರಾಮದ 42 ವರ್ಷದ ಮಹಿಳೆ ಮಾಲತಿ ನಾಗರಾಜ ನಾಯ್ಕ ಅವರು ಹೊಟ್ಟೆನೋವಿನಿಂದಾಗಿ ಮೃತಪಟ್ಟ ಘಟನೆ ನಡೆದಿದೆ.
ಏಪ್ರಿಲ್ 16ರಂದು ಮಾಲತಿ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆ ದಿನ ಮನೆಯಲ್ಲೇ ವಿಶ್ರಾಂತಿ ಪಡೆದಿದ್ದರು. ಆದರೆ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಏಪ್ರಿಲ್ 17ರಂದು ಅವರನ್ನು ಭಟ್ಕಳದ ಸಂಶನೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ, ಹೆಚ್ಚಿನ ಚಿಕಿತ್ಸೆಗೆ ಉಡುಪಿ ಕಡೆಗೆ ಕರೆದೊಯ್ಯಲಾಗುತ್ತಿತ್ತು.
ಈ ವೇಳೆ ದಾರಿ ಮಧ್ಯೆಯೇ ಮಾಲತಿ ಅವರು ಉಸಿರು ನಿಲ್ಲಿಸಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮೃತೆಯ ಪತಿ ನಾಗರಾಜ ನಾಯ್ಕ ಮಾಹಿತಿ ನೀಡಿದ್ದು, ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Ads on article

Advertise in articles 1

advertising articles 2

Advertise under the article