ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Udupi ಕುಂದಾಪುರ: ಕಲಾ ಚೇತನ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ: ಅಶೋಕ್ ದೇವಾಡಿಗ ಆನಗಳ್ಳಿ

Udupi ಕುಂದಾಪುರ: ಕಲಾ ಚೇತನ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ: ಅಶೋಕ್ ದೇವಾಡಿಗ ಆನಗಳ್ಳಿ


ಕುಂದಾಪುರ: ಕಳೆದ 35 ವರ್ಷಗಳಿಂದ ಕರಾವಳಿ ಭಾಗದಲ್ಲಿ ಕಲಾಕ್ಷೇತ್ರ ಹಾಗೂ ಕಲಾ ರಂಗದಲ್ಲಿ ಒಂದಾದ ನಾಟಕ ರಂಗದಲ್ಲಿ ತನ್ನದೇ ಆದ ಚಾಕು ಮೂಡಿಸಿ ಕಲಾ ಪ್ರೇಕ್ಷಕರ ಮನ ಗೆದ್ದ ನಟ ಅಶೋಕ್ ದೇವಾಡಿಗ ರವರಿಗೆ ಅಂತರಾಷ್ಟ್ರೀಯ ಹಿಂದೂ ಮಹಾಸಭಾ ವತಿಯಿಂದ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 135 ನೇ ಜಯಂತಿಯ ಅಂಗವಾಗಿ ದೇಶದ ಅತ್ಯುತ್ತಮ ಕಲಾ ಕ್ಷೇತ್ರದ ಕಲಾ ಪ್ರಶಸ್ತಿಗೆ ಪ್ರಶಸ್ತಿ ಕಲಾ ಚೇತನ ಅಂತರಾಷ್ಟ್ರೀಯ ಪ್ರಶಸ್ತಿ -2026 ಆಯ್ಕೆಯಾಗಿದ್ದಾರೆ, 
ಕಾಳಿಂಗ ದೇವಾಡಿಗ ಲಕ್ಷ್ಮಿ ದೇವಾಡಿಗ ರವರ ಪ್ರಥಮ ಪುತ್ರರಾದ ಅಶೋಕ್ ದೇವಾಡಿಗ ರವರು ಧರ್ಮ ಪತ್ನಿ ಸವಿತಾ, ಹಾಗೂ ಮಕ್ಕಳಾದ ಆರ್ಯ ಮತ್ತು ಸ್ಕಂದ ರೊಂದಿಗೆ ಸೇರಿದಂತೆ ಕುಟುಂಬದವರು ಹೊಂದಿರುತ್ತಾರೆ ಇವರು ಮೂವತ್ತೈದು ವರ್ಷಗಳ ಹಿಂದೆ ಯಕ್ಷಗಾನ ರಂಗದಲ್ಲಿ ಬಾಲ ಗೋಪಾಲನಗಿ ಕಲಾ ಸೇವೆಗೆ ಪ್ರವೇಶ ಮಾಡಿದ ಅಶೋಕ್ ದೇವಾಡಿಗ ರವರು ಇಂದು ಹೋಬಳಿ,   ತಾಲೂಕು, ಜಿಲ್ಲೆ, ರಾಜ್ಯ, ದೇಶ, ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮರವಾಗಿ ಬೆಳೆದು ಲಕ್ಷಾಂತರ ಕಲಾ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ,
ಹೌದು ಇವರ ಕಲಾಸೇವೆ ಸಮಾಜಮುಖಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಇವರು ನೀಡಿರುವ ಸಮಾಜಮುಖಿ ಸೇವೆಗಳನ್ನು ಗುರುತಿಸಿ ದೇಶದ ಅತ್ಯುತ್ತಮ ಕಲಾ ಚೇತನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ, 

ಅಶೋಕ್ ದೇವಾಡಿಗ ರವರಿಗೆ ಈ ಪ್ರಶಸ್ತಿಯಿಂದ ಇನ್ನಷ್ಟು ಕಲಾಕ್ಷೇತ್ರದ ಕಲಾಸೇವೆಯ ಜವಾಬ್ದಾರಿ ಹೆಚ್ಚಾಗಿದ್ದು ಇವರ ಸಾಧನೆ ಇನ್ನಷ್ಟು ಉತ್ತಂಗಕ್ಕೆ ಏರಲಿ ಎನ್ನುವುದೇ ಕಲಾಪೇಕ್ಷಕರು ಹಾಗೂ ಸಾರ್ವಜನಿಕರ ಅಭಿಪ್ರಾಯವಾಗಿದೆ.

ವರದಿ: ದಾಮೋದರ ಮೊಗವೀರ ನಾಯಕವಾಡಿ COSTALNEWS ಕುಂದಾಪುರ

Ads on article

Advertise in articles 1

advertising articles 2

Advertise under the article