ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Udupi : ಕುಂದಾಪುರಪೇಟೆ ವೆಂಕಟರಮಣ ದೇವಸ್ಥಾನದ ವಿಜೃಂಭಣೆಯ ಬ್ರಹ್ಮ ರಥೋತ್ಸವ

Udupi : ಕುಂದಾಪುರಪೇಟೆ ವೆಂಕಟರಮಣ ದೇವಸ್ಥಾನದ ವಿಜೃಂಭಣೆಯ ಬ್ರಹ್ಮ ರಥೋತ್ಸವ



ಕುಂದಾಪುರ: ಪುರಸಭೆ ವ್ಯಾಪ್ತಿಯ ಪೇಟೆ ವೆಂಕಟರಮಣ ದೇವಸ್ಥಾನ ಪುರಾತನ ಪ್ರಸಿದ್ಧ ಕಾರ್ಣಿಕ ದೇವಸ್ಥಾನ ಇದಾಗಿದ್ದು ಸರಿಸುಮಾರು 200 ವರ್ಷಕ್ಕೂ ಅಧಿಕ ಕಾಲದಿಂದಲೂ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆಯುತ್ತಿದೆ ಎಂಬ ಇತಿಹಾಸ ಇದೆ 
ಹೌದು ಶುಕ್ರವಾರ ರಾಮ ನವಮಿಯ ದಿನದಂದು ಪೇಟೆ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವ ಅದ್ದೂರಿಯಾಗಿ ವಿಜೃಂಭಣೆಯಿಂದ ಜರುಗಿತು, ಭಕ್ತರಿಂದ ಶ್ರೀ ದೇವರಿಗೆ ವಿಶೇಷ ಪೂಜೆ ನೈವೇದ್ಯ ಹಾಗೂ ವಿಶೇಷವಾಗಿ ರಥದಲ್ಲಿ ಅಲಂಕರಿಸಿ ವಿರಾಜಮಾನರಾಗಿ ಕೂತಿರುವ ಪೇಟೆ ವೆಂಕಟರಮಣ ದೇವರಿಗೆ ಸಾರ್ವಜನಿಕರು ಸರದಿ ಸಾಲಿನಲ್ಲಿ ಬಂದು ರಥವನ್ನು ಏರಿ ಶ್ರೀ ದೇವರ ದರ್ಶನ ಪಡೆದು ಮುಡಿಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು 
 ಬ್ರಹ್ಮರಥೋತ್ಸವದ ವೇಳೆ ಸಾರ್ವಜನಿಕರಿಗೆ ಶ್ರೀ ದೇವರ ಪ್ರಸಾದದ ಪಾಯಸದ ಅನ್ನ ಸಂತರ್ಪಣೆ ಬಾಳೆಹಣ್ಣು ನೀಡಲಾಯಿತು 
ಈ ವೇಳೆ ಕುಂದಾಪುರ ಪೊಲೀಸ್ ಠಾಣಾಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಂಚಾರ ಪೊಲೀಸ ಠಾಣಾಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಹೋಂ ಗಾರ್ಡ್ ಸಿಬ್ಬಂದಿಗಳು ಹಾಜರಿದ್ದು ಬಂದೋಬಸ್ತ್ ಕಾರ್ಯದಲ್ಲಿ ಸಹಕರಿಸಿದರು

Ads on article

Advertise in articles 1

advertising articles 2

Advertise under the article