ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Udupiಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ : ಧರಣಿ ಕುಳಿತುಕೊಳ್ಳಲು ರಘುಪತಿ ಭಟ್ ನಿರ್ಧಾರ…!!

Udupiಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ : ಧರಣಿ ಕುಳಿತುಕೊಳ್ಳಲು ರಘುಪತಿ ಭಟ್ ನಿರ್ಧಾರ…!!

ಉಡುಪಿ: ನನ್ನ ರೆಸಾರ್ಟ್‌ಗೆ ಸಂಬಂಧಿಸಿದ ಸಿಂಗಲ್ ಲೇಔಟ್ ನೀಡುವ ವಿಚಾರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದವರು ಕಳೆದ ಎರಡು ವರ್ಷಗಳಿಂದ ಸತಾಯಿಸುತ್ತಿದ್ದಾರೆ ಎಂದು ಮಾಜಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.
ಈ ಕುರಿತು ತಮ್ಮ ನಿವಾಸದಲ್ಕಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಕ್ಷಣವೇ ಸಿಂಗಲ್ ಲೇಔಟ್ ಮಂಜೂರು ಮಾಡಬೇಕು. ಇಲ್ಲವಾದರೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಹಿಂಬರಹ ನೀಡಬೇಕು. ಈ ಬೇಡಿಕೆ ಈಡೇರುವ ತನಕ ಸೋಮವಾರದಿಂದ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಧರಣಿ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ನಾನು ಮೊದಲಿನಿಂದಲೂ ಉದ್ಯಮಿ.ರಾಜಕೀಯ ನನ್ನ ಪ್ರವೃತ್ತಿಯಾಗಿತ್ತು.ಉದ್ಯಮ ನನ್ನ ವೃತ್ತಿ.ಕಳೆದ 2 ವರ್ಷಗಳಿಂದ ಉಡುಪಿ ಶಾಸಕರು ರಾಜಕೀಯ ದ್ವೇಷದಿಂದ ಸಿಂಗಲ್ ಲೇಔಟ್ ನೀಡಲು ಸತಾಯಿಸುತ್ತಿದ್ದಾರೆ.ಈ ಬಗ್ಗೆ ಎಲ್ಲ ರೀತಿಯಲ್ಲೂ ಅಧಿಕಾರಿಗಳಿಗೆ ತಿಳಿಸಿದ್ದೇನೆ.ಕೋರ್ಟ್ ಗೂ ಹೋಗಿದ್ದೇನೆ.ಇದೀಗ ನ್ಯಾಯಕ್ಕಾಗಿ ಧರಣಿ ಮೊರೆ ಹೋಗಿದ್ದೇನೆ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.

Ads on article

Advertise in articles 1

advertising articles 2

Advertise under the article