Udupi ಕುಂದಾಪುರ: ದೀನ್ ದಯಾಳ್ ಸತತ್ ವಿಕಾಸ್ ರಾಷ್ಟ್ರೀಯ ಪ್ರಶಸ್ತಿ-2025 ಮುಡಿಗೇರಿಸಿಕೊಂಡ ಹಕ್ಲಾಡಿ ಗ್ರಾಮ ಪಂಚಾಯತ್
Tuesday, March 31, 2026
ಕುಂದಾಪುರ : ದೀನ್ ದಯಾಳ್ ಸತತ್ ವಿಕಾಸ್ ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ಹಕ್ಲಾಡಿ ಗ್ರಾಮ ಪಂಚಾಯತ್
ರಾಷ್ಟ್ರೀಯ ಪಂಚಾಯತ್ ಪುರಸ್ಕಾರವಾದ ದೀನ ದಯಾಳ್ ಸತತ್ ವಿಕಾಸ್ ರಾಷ್ಟ್ರೀಯ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಹಕ್ಲಾಡಿ ಗ್ರಾಮ ಪಂಚಾಯತ್ ಪಡೆದುಕೊಂಡಿದ್ದು, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿ ಎಲ್ಲರ ಗಮನ ಸೆಳೆದಿದೆ.
ಗ್ರಾಮ ಪಂಚಾಯತ್ ಅಂದರೆ ಅದು ಸ್ಥಳೀಯ ಸರ್ಕಾರ. ಅದರ ಮೂಲಕವೇ ಗ್ರಾಮಗಳ ಅಭಿವೃದ್ಧಿ ಕೆಲಸಗಳು ಅಭಿವೃದ್ಧಿ ಮಾಡಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮ ಪಂಚಾಯತ್ ಹೆಗ್ಗಳಿಕೆಗೆ ಪಾತ್ರವಾಗಿದೆ
ಹೌದು, ರಾಷ್ಟ್ರೀಯ ಪಂಚಾಯತ್ ಪುರಸ್ಕಾರವಾದ ದೀನ ದಯಾಳ್ ಸತತ್ ವಿಕಾಸ್ ರಾಷ್ಟ್ರೀಯ ಪ್ರಶಸ್ತಿಯನ್ನು ಹಕ್ಲಾಡಿ ಗ್ರಾಮ ಪಂಚಾಯತ್ ಪಡೆದುಕೊಂಡಿದ್ದು, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿ ಎಲ್ಲರ ಗಮನ ಸೆಳೆದಿದೆ. ಪಂಚಾಯಿತಿಯನ್ನು ಪರಿಸರ ಪೂರಕ ಅಭಿವೃದ್ಧಿ ಮಾಡಿದ್ದಕ್ಕಾಗಿ 24- 25ನೇ ಸಾಲಿನ ಪ್ರಶಸ್ತಿಯನ್ನು ಪಂಚಾಯಿತ ತನ್ನದಾಗಿಸಿಕೊಂಡಿದೆ. ಆ ಮೂಲಕ ಬರೋಬ್ಬರಿ ಒಂದು ಕೋಟಿ ನಗದು ಬಹುಮಾನವನ್ನು ಪಂಚಾಯಿತಿ ಗಳಿಸಿದೆ. ಈ ಬಹುಮಾನ ಗಳಿಸುವುದಕ್ಕೆ ಪಂಚಾಯಿತಿ ನಿರಂತರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಲೇ ಬಂದಿದೆ
ಒಟ್ಟಾರೆಯಾಗಿ ಹಕ್ಲಾಡಿ ಗ್ರಾಮ ಪಂಚಾಯತ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕದಿಂದ ರಾಷ್ಟ್ರಮಟ್ಟಕ್ಕೆ ಸ್ಪರ್ಧಿಸಿದ ಪಂಚಾಯಿತಿಗಳಲ್ಲಿ ಅಂತಿಮವಾಗಿ ಹಕ್ಲಾಡಿ ಪಂಚಾಯಿತಿಗೆ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಭದ್ರತೆವುಳ್ಳ ಗ್ರಾಮ ಎಂಬ ದೀಮ್ ನಡಿ ಒಲಿದ ಪ್ರಶಸ್ತಿಯ ಸೌಭಾಗ್ಯ ..! ಎಂದು ಹಕ್ಲಾಡಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,
ಹಾಗೂ ಪಂಚಾಯಿತಿನಲ್ಲಿ ಇಂತಹ ಪ್ರಾಮಾಣಿಕ ಕರ್ತವ್ಯ ನಿಷ್ಠೆ ನಿರ್ವಹಿಸಲು ಸಹಕರಿಸಿದ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಸಾರ್ವಜನಿಕ ವಲಯದಲ್ಲಿ ಬಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.