ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kota ಇಸ್ಪೀಟ್ ಜುಗಾರಿ ಆಡುತ್ತಿದ್ದ ಕ್ಲಬ್ ಮೇಲೆ ಕೋಟ ಪೊಲೀಸರ ದಾಳಿ : 10 ಮಂದಿಯ ಬಂಧನ

Kota ಇಸ್ಪೀಟ್ ಜುಗಾರಿ ಆಡುತ್ತಿದ್ದ ಕ್ಲಬ್ ಮೇಲೆ ಕೋಟ ಪೊಲೀಸರ ದಾಳಿ : 10 ಮಂದಿಯ ಬಂಧನ

ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಡುತ್ತಿದ್ದ ಕ್ಲಬ್ ಮೇಲೆ ಕೋಟ ಪೊಲೀಸರು ದಾಳಿ ನಡೆಸಿ 10 ಮಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ.

ಮಾರ್ಚ್ 10 ರಂದು ಸಾಯಂಕಾಲ ಕೋಟ ಪೊಲೀಸ್‌ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ತೆಕ್ಕಟ್ಟೆ ಗ್ರಾಮದ ಜನಪ್ರಿಯ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿರುವ ಎಸ್.ಪಿ ಕ್ರಿಯೇಷನ್ ಕ್ಲಬ್ ಮೇಲೆ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದರು.
ದಾಳಿಯ ವೇಳೆ ಆರೋಪಿಗಳಾದ ಸದಾಶಿವ ದೇವಾಡಿಗ, ಜಯರಾಮ, ರಾಘವೇಂದ್ರ, ಗಣೇಶ, ದಯಾನಂದ, ಪ್ರಭಾಕರ, ಸದಾಶಿವ, ಜಯರಾಜ್ ಶೆಟ್ಟಿ, ಆನಂದ ಮತ್ತು ಹರೀಶರನ್ನು ಬಂಧಿಸಲಾಗಿದೆ.
ಸ್ಥಳದಿಂದ ₹65,664 ನಗದು ಹಣ, ಕಾಯಿನ್‌ಗಳು, 10 ಮೊಬೈಲ್ ಫೋನ್‌ಗಳು, 31 ಪ್ಲಾಸ್ಟಿಕ್ ಕುರ್ಚಿಗಳು, ಒಂದು ದೊಡ್ಡ ರೌಂಡ್ ಟೇಬಲ್, ಒಂದು ಸಣ್ಣ ರೌಂಡ್ ಟೇಬಲ್, ಕ್ಲಬ್‌ನ ಸಿಸಿ ಕ್ಯಾಮೆರಾ ಡಿವಿಆ‌ರ್, ಎರಡು ಲೆಜ್ಜರ್ ಪುಸ್ತಕಗಳು ಹಾಗೂ KA-20-ER-3444 ಸಂಖ್ಯೆಯ ಟಿವಿಎಸ್ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 40/2026 ಅಡಿಯಲ್ಲಿ KP ACT 79, 80 ಹಾಗೂ BNS 112 ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Ads on article

Advertise in articles 1

advertising articles 2

Advertise under the article