Bainduru ಬೈಂದೂರು: ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಇದ್ರು, ಬಸ್ ಮಾತ್ರ ಬರ್ತಾನೆ ಇಲ್ಲ: ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ
Thursday, March 5, 2026
ಬೈಂದೂರು: ಹಲವು ಬಾರಿ ಸುದ್ದಿ ಪ್ರಸಾರ ಆದರೂ ಇನ್ನೂ ಸಮಸ್ಯೆ ಬಗೆ ಹರಿಯಲೇ ಇಲ್ಲ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ
ಹೌದು ಯಡ್ತರೆ ಬಳಿ ನೂತನ KSRTC ಬಸ್ ಸ್ಟಾಂಡ್ ಉದ್ಘಾಟನೆ ಆಗಿ ಎರಡು ತಿಂಗಳು ಕಳೆದಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ KSRTC ನಿಗಮ ಬೈಂದೂರು ತಾಲೂಕಿಗೆ ಬೇಜವಾಬ್ದಾರಿಯಿಂದ ಸಾರ್ವಜನಿಕರಿಗೆ ಸಿಗಬೇಕಾದಂತ ಮೂಲಭೂತ ಸೌಲಭ್ಯ ದೊರೆಯುತ್ತಿಲ್ಲ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ,
ಹಲವು ಬಾರಿ ಸುದ್ದಿ ಬಿತ್ತರ ಮಾಡುತ್ತಿದ್ದರು ಅಧಿಕಾರಿಗಳು ಜನಪ್ರತಿನಿಧಿಗಳು ಕಿವಿಗಳಿಗೆ ಹೇಳದೆ ಸಮಸ್ಯೆ ಹಾಗೆ ಉಳಿದಿದೆ.
ರಾಹೇ ಹೊನ್ನಾವರ Division Service Road ಬಿಡಲು ಒಪ್ಪಲೇ ಇಲ್ಲ ಕುಂದಾಪುರ ಕಡೆಯಿಂದ ಬಸ್ ಬಾರದೆ ಎರಡು ತಿಂಗಳೇ ಕಳೆದಿದೆ.
ಇಂದು ನಾಳೆ ರಾಷ್ಟ್ರೀಯ ಹೆದ್ದಾರಿ Service ರೋಡ್ ಅಥವಾ Dividers Open ಮಾಡಿ ಕೊಡುತ್ತಾರೆ ಎಂದು ಕಾದು ಕುಳಿತು ಸಾಕಾಗಿ ಹೋಗಿದ್ದು ಎಂದು ನಾಗರಿಕ ಸಮಿತಿ ಬೈಂದೂರು ಅಧ್ಯಕ್ಷ ರವೀಂದ್ರ ಶೇಟ್ ಸರಕಾರದ ವಿರುದ್ಧ ಆಕ್ರೋಶದಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಬೈಂದೂರು ಭಾಗದ ಪ್ರಜ್ಞಾವಂತ ನಾಗರಿಕರ ಬಹಳಷ್ಟು ಹೋರಾಟದಿಂದ ಅಂತೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಲೋಕಾರ್ಪಣೆಗೊಂಡಿ ಆದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿದೆ ಎಂದು ಬೈಂದೂರು ನಾಗರಿಕರ ಅಭಿಪ್ರಾಯ
ಭಟ್ಕಳ್ ಹಾಗೂ ಕುಂದಾಪುರ ನಡುವೆ 55 ಕಿಮೀ ಅಂತರ ದಲ್ಲಿ ಯಾವುದೇ Ksrtc Bus ಡಿಪೋ ಇಲ್ಲ ಕುಂದಾಪುರ ಡಿಪೋ ಬಾರಿ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಜನಪ್ರತಿನಿಧಿ ಎಲ್ಲಿ ಹೋಗಿದ್ದಾರೆ, ಹೋರಾಟಗರು ಎಲ್ಲಿ ಎಂದು ಜನ ಕೇಳುವ ಪರಿಸ್ಥಿತಿ ಬಂದಿದೆ. ಸುದ್ದಿಗಾರರು ಸಮಸ್ಯೆ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಕ್ಕೆ ಡೋಂಟ್ ಕೇರ್ ಸ್ಥಿತಿ ಆಗಿದೆ.
1) ಬೈಂದೂರು ಬಸ್ ಸ್ಟಾಂಡ್ ನಲ್ಲಿ ರಿಜರ್ವೇಶ್ ಟಿಕೆಟ್ ಇಲ್ಲಾ.
2) ಬಸ್ ಸ್ಟಾಂಡ್ ಗೆ ಸರ್ಕಾರದ ಫೋನ್ ನಂಬ್ರ ಇಲ್ಲ
3) ನೂತನ ಬಸ್ ಸ್ಟಾಂಡ್ ನಲ್ಲಿ ಯಾವುದೇ ಹೋಟೆಲ್-ಅಂಗಡಿ ಮುಂಗಟ್ಟ್ ಗಳು ಇನ್ನು ಯಾವುದೇ ತೆರೆದಿಲ್ಲ.
4) ಬಸ್ ಸ್ಟಾಂಡ್ ನಲ್ಲಿ ಊರಿಂದ ಊರಿಗೆ ಹೋಗುವವರಿಗೆ TV ಡಿಸ್ಪ್ಲೇ ಇಲ್ಲ
5) ಉಡುಪಿ ಜಿಲ್ಲೆ ಕಡೆಯಿಂದ ಗಳಿಂದ ಬಂದ Bus ಬರಲ್ಲ.
6) KSRTC ಬಸ್ ಸ್ಟಾಂಡ್ ನಲ್ಲಿ ಬೇರೆ ಬೇರೆ ಊರುಗಳಿಗೆ ಹೋಗುವವರು ಬರುವವರು ಪ್ರತಿ ದಿನ ಪ್ರಯಾಣ ಮಾಡುವ ಪ್ರಯಾಣಿಕರು ಮದ್ಯೆ ದಾರಿಯಲ್ಲಿ ಇಳಿಯಬೇಕಾಗಿದೆ .
ಕೂಡಲೇ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗಲು ಸರ್ವಿಸ್ ರಸ್ತೆ ಹಾಗೂ ಯು ಟರ್ನ್ ಜಂಕ್ಷನ್ (ನೀರಿನ ಕಾಲುವೆ ) ಚರಂಡಿ ವ್ಯವಸ್ಥೆ ರಸ್ತೆಗೆ ಬೀದಿ ದೀಪಗಳು ಸರ್ಕಾರದ ಬಸ್ ನಿಲ್ದಾಣಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಕೂಡಲೇ ಆದ್ಯತೆ ನೀಡಬೇಕು ಎಂದು ನಾಗರಿಕ ಸಮಿತಿ ಯ ಅಧ್ಯಕ್ಷ ರವೀಂದ್ರ ಶೇಟ್ ಸರಕಾರಕ್ಕೆ ಮನವಿ ಮಾಡಿದ್ದಾರೆ ಮುಂದಿನ ದಿನದಲ್ಲಿ
ಇಲ್ಲಿ ಹೋರಾಟಕ್ಕೆ ಸಿದ್ದತೆ ಆಗುತ್ತಿದೆ ಎಂದು ಹೇಳಿದರು