ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

BIG  BREAKING NEWS ಕುಂದಾಪುರ : ಗುಜ್ಜಾಡಿ ಗೇರು ಪ್ಲಾಂಟೇಷನ್ ನಲ್ಲಿ ಅಗ್ನಿ ಅವಘಡ..! ಕಾಡ್ಗಿಚ್ಚಿನಂತೆ ಹರಡುತ್ತಿರುವ ಬೆಂಕಿ..! ಬೆಂಕಿ ನಂದಿಸುವ ಕಾರ್ಯಚರಣೆ ಮುಂದುವರಿದಿದೆ

BIG BREAKING NEWS ಕುಂದಾಪುರ : ಗುಜ್ಜಾಡಿ ಗೇರು ಪ್ಲಾಂಟೇಷನ್ ನಲ್ಲಿ ಅಗ್ನಿ ಅವಘಡ..! ಕಾಡ್ಗಿಚ್ಚಿನಂತೆ ಹರಡುತ್ತಿರುವ ಬೆಂಕಿ..! ಬೆಂಕಿ ನಂದಿಸುವ ಕಾರ್ಯಚರಣೆ ಮುಂದುವರಿದಿದೆ



ಕುಂದಾಪುರ: ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಮುಳ್ಳಿಕಟ್ಟೆ ನಾಯಕವಾಡಿ ಸಂಪರ್ಕಿಸುವ ರಾಜ್ಯ ಮುಖ್ಯರಸ್ತೆಯ ಗೇರು ಪ್ಲಾಂಟೇಷನ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ, 
ಬುದುವಾರ ಬೆಳಗಿನ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ, ಮೇಲ್ನೋಟಕ್ಕೆ ಸಿಗರೇಟು ಸೇದಿ ಬಿಸಾಡಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ, 

ಬೆಂಕಿ ಅವಘಡಕ್ಕೆ ಗೇರು ಪ್ಲಾಂಟೇಷನ್ ನಲ್ಲಿರುವ ಗೇರು ಮರಗಳು ಸೇರಿದಂತೆ ಇನ್ನು ಹಲವು ಮರಗಳು ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಹಾನಿಯಾಗಿದೆ, 
ಈ ವೇಳೆ 112 ಪೊಲೀಸ್ ಚಾಲಕ ಸುರೇಶ್ M ರವರು ಕಾಡ್ಗಿಚ್ಚಿನಂತೆ ಹರಡುತ್ತಿರುವ ಬೆಂಕಿಯನ್ನು ನಂದಿಸಲು ಕರ್ತವ್ಯದ ಜೊತೆಗೆ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಬೆಂಕಿಯ ಜೊತೆಗೆ ಸಣಸಾಡುವ ದೃಶ್ಯ ಕಂಡು ಬಂದಿದೆ ಹಾಗೂ ಕರುಣಾಕರ ಎಂಬಾತನು ಕೂಡ ಛಲ ಬಿಡದೆ ಬೆಂಕಿ ನಂದಿಸುವ ಕಾರ್ಯಚರಣೆ ಮಾಡಿರುವ ದೃಶ್ಯ ಕಂಡು ಬಂದಿದೆ
ಪ್ರತಿವರ್ಷ ಗೇರು ಪ್ಲಾಂಟೇಷನ್ ಏಲಂ ಪ್ರಕ್ರಿಯೆ ಆದ ನಂತರ ಇದೇ ಟೈಮಿನಲ್ಲಿ ಬೆಂಕಿ ಬೀಳುತ್ತಿರುವುದು ಬಗ್ಗೆ ಸಾರ್ವಜನಿಕ ವಲಯದಲ್ಲಿ ಗುಸು ಗುಸು ಸುದ್ದಿ ಹರಿದಾಡುತ್ತಿದೆ , ಬೆಂಕಿ ನಂದಿಸುವ ಕಾರ್ಯಕ್ರಮ ಮುಂದುವರಿದಿದೆ. ಘಟನೆಯ ಕುರಿತು ತನಿಖೆ ಮುಂದುವರಿಯುವ ಸಾಧ್ಯತೆಯೂ ಕೂಡ ಹೆಚ್ಚಿದೆ ಎನ್ನಲಾಗುತ್ತಿದೆ.
ಪ್ರತಿವರ್ಷ ಗೇರು ಪ್ಲಾಂಟೇಷನ್ ಏಲಂ ಪ್ರಕ್ರಿಯೆ ಆದ ನಂತರ ಇದೇ ಟೈಮಿನಲ್ಲಿ ಬೆಂಕಿ ಬೀಳುತ್ತಿರುವುದು ಬಗ್ಗೆ ಸಾರ್ವಜನಿಕ ವಲಯದಲ್ಲಿ ಗುಸು ಗುಸು ಸುದ್ದಿ ಹರಿದಾಡುತ್ತಿದೆ , ಬೆಂಕಿ ನಂದಿಸುವ ಕಾರ್ಯಕ್ರಮ ಮುಂದುವರಿದಿದೆ. ಘಟನೆಯ ಕುರಿತು ತನಿಖೆ ಮುಂದುವರಿಯುವ ಸಾಧ್ಯತೆಯೂ ಕೂಡ ಹೆಚ್ಚಿದೆ ಎನ್ನಲಾಗುತ್ತಿದೆ

ಘಟನಾ ಸ್ಥಳಕ್ಕೆ ಕುಂದಾಪುರ ಅಗ್ನಿಶಾಮಕ ದಳ, ಗಂಗೊಳ್ಳಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ , ಗುಜ್ಜಾಡಿ ಗ್ರಾಮ ಆಡಳಿತಅಧಿಕಾರಿ ಸೋಮಪ್ಪ, ಮೆಸ್ಕಾಂ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು, ಗಂಗೊಳ್ಳಿ ಆಪತ್ಬಾಂಧವ ಆಂಬುಲೆನ್ಸ್ ಇಬ್ರಾಹಿಂ ಗಂಗೊಳ್ಳಿ, 112 ಪೊಲೀಸ್ ಸಿಬ್ಬಂದಿಗಳು, ಅರಣ್ಯ ಇಲಾಖೆ , ಕೆ ಸಿ ಡಿ ಸಿ ಅಧಿಕಾರಿಗಳು ಸಿಬ್ಬಂದಿಗಳು, ಸಾರ್ವಜನಿಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು

ವರದಿ: ಸುರೇಶ್ ಅಮಾಸೆ ಬೈಲು ಕೋಸ್ಟಲ್ ನ್ಯೂಸ್ ಕುಂದಾಪುರ 

Ads on article

Advertise in articles 1

advertising articles 2

Advertise under the article