Udupi :ಬದುಕಿನ ಪಾಠ ಕಲಿಸಿದ 'ಹೆಜ್ಜೆ ಸಂಭ್ರಮ': ಸಾಧನೆಗೆ ವೈಫಲ್ಯ ಅಡ್ಡಿಯಲ್ಲ : ಹೆಜ್ಜೆ ಸಂಭ್ರಮ'
Saturday, January 31, 2026
ಕಾರ್ಯಕ್ರಮದಲ್ಲಿ.ಸ್ಪಂದನ ಬೌದ್ಧಿಕ ದಿವ್ಯಾಂಗರ ಪುನರ್ವಸತಿ ಕೇಂದ್ರದ ಮಕ್ಕಳ ಅದ್ಭುತ ಪ್ರದರ್ಶನ. ಈ ಸಂಸ್ಥೆಯ ಸ್ಥಾಪಕರಾದ ಶ್ರೀಯುತ ಜನಾರ್ಧನ್ ಉಪ್ಪೂರು ಅವರ ಮಾರ್ಗದರ್ಶನದಲ್ಲಿ ಬೆಳೆಯುತ್ತಿರುವ ಈ ವಿಶೇಷ ಚೇತನಗಳು, ವೇದಿಕೆಯ ಮೇಲೆ ತಮ್ಮ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ "ನಾವು ಯಾರಿಗೂ ಕಡಿಮೆಯಿಲ್ಲ" ಎಂಬುದನ್ನು ಸಾಬೀತುಪಡಿಸಿದರು.
ಕೇವಲ ಮನರಂಜನೆಗೆ ಸೀಮಿತವಾಗದೆ, ವಿಶೇಷ ಮಕ್ಕಳ ಬದುಕು ಮತ್ತು ಅವರ ಒಳಗಿನ ಸಂವೇದನೆಗಳನ್ನು ಪ್ರತಿಬಿಂಬಿಸುವ ಕಥಾರೂಪಕ ಕಾರ್ಯಕ್ರಮವು ಪ್ರೇಕ್ಷಕರಲ್ಲಿ ಭಾವನಾತ್ಮಕ ಅಲೆ ಎಬ್ಬಿಸಿತು. ಈ ಮಕ್ಕಳಿಗೆ ಶಿಕ್ಷಕಿಯರಾದ ಶ್ರೀಮತಿ ರೋಹಿಣಿ, ಶ್ರೀಮತಿ ಶುಭ ಹಾಗೂ ಶ್ರೀಮತಿ ಮೋಹಿನಿ ಮತ್ತು ಇತರ ಶಿಕ್ಷಕೇತರ ಸಿಬ್ಬಂದಿಗಳು ಸಕ್ರಿಯವಾಗಿ ಸಾಥ್ ನೀಡಿದರು.
ಅದು ಬದುಕಿನ ದೊಡ್ಡ ಪಾಠವಾಗಿತ್ತು. ದೇಹದ ವೈಫಲ್ಯಗಳನ್ನು ಮೆಟ್ಟಿ ನಿಂತು ಸಾಧಿಸಬಲ್ಲ ಚೈತನ್ಯ ಈ ಮಕ್ಕಳಲ್ಲಿದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ."
ಹೆಜ್ಜೆ ಗೆಜ್ಜೆಗಳ ನಾದದೊಂದಿಗೆ ನಡೆದ ಈ 'ಹೆಜ್ಜೆ ಸಂಭ್ರಮ'ವು ಸಮಾಜಕ್ಕೆ ಒಂದು ಪ್ರಬಲ ಸಂದೇಶವನ್ನು ರವಾನಿಸಿತು. ದೈಹಿಕ ಸವಾಲುಗಳನ್ನು ಮೀರಿ ನಿಲ್ಲುವ ಛಲವಿದ್ದರೆ ಜೀವನದ ಯಾವುದೇ ಹಂತದಲ್ಲೂ ಯಶಸ್ಸು ಸಾಧಿಸಬಹುದು ಎಂಬ ಸಾರಾಂಶದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತ..