udupi ಶ್ರೀ ಬಬ್ಬು ಸ್ವಾಮಿ ಮೂಲ ಕ್ಷೇತ್ರಕ್ಕೆ ಅನುದಾನ ನೀಡುವಂತೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ.
Saturday, January 31, 2026
ಉಡುಪಿ: ಶ್ರೀ ಬಬ್ಬುಸ್ವಾಮಿ, ಮೂಲಕ್ಷೇತ್ರ, ಜನ್ಮಸ್ಥಳ, ಪಡುತೋನ್ಸೆ, ಕೆಮ್ಮಣ್ಣು, ಉಡುಪಿ ಜಿಲ್ಲೆ, ಇಲ್ಲಿನ ಜೀರ್ಣೋದ್ದಾರ ಕಾಮಗಾರಿಗೆ ಅನುದಾನ ಕೋರಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ದೇವಸ್ಥಾನದ ಆಡಳಿತ ಮಂಡಳಿ ಭೇಟಿ ಮಾಡಿ ಮನವಿ ಮಾಡಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ.ಖಾದರ್ ಫರೀದ್ ರವರ ಮುಖಾಂತರ ಭೇಟಿಯಾಗಿ ಅನುದಾನ ಒದಗಿಸಿಕೊಡುವಂತೆ ಕೋರಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಮುಕ್ತೇಸರಾದ ಕೋಡಿಕಂಡಾಲ ಗುತ್ತು ಶ್ರೀ ರಘುರಾಮ ಶೆಟ್ಟಿ, ಕಂಡಾಲ, ಅಧ್ಯಕ್ಷರಾದ ಶ್ರೀ ಮಧುಸೂದನ ಪೂಜಾರಿ ಕೆಮ್ಮಣ್ಣು, ಗುರಿಕಾರರಾದ ಸುಧಾಕರ್ ಮಾಸ್ಟರ್, ಸಭಾಧ್ಯಕ್ಷರ ಆಪ್ತ ಸಹಾಯಕರಾದ
ಶ್ರೀ ಪ್ರವೀಣ್ ಕುಮಾರ್ ಜೆ.ಪಿ., ಉದ್ಯಮಿ ಶ್ರೀ ಜಗದೀಶ್ ಗಂಗೊಳ್ಳಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.