ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

bainduru: ಹಿಂದಿನಿಂದಲೂ ಬೈಂದೂರು ಭಾಗದ ಜನ ನಮ್ಮ ಕ್ಷೇತ್ರಕ್ಕೆ ಬಹಳಷ್ಟು ಭಕ್ತರು ಇದ್ದಾರೆ:  ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.  ವೀರೇಂದ್ರ ಹೆಗ್ಡೆ

bainduru: ಹಿಂದಿನಿಂದಲೂ ಬೈಂದೂರು ಭಾಗದ ಜನ ನಮ್ಮ ಕ್ಷೇತ್ರಕ್ಕೆ ಬಹಳಷ್ಟು ಭಕ್ತರು ಇದ್ದಾರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆ

ಬೈಂದೂರು: ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಯವರ ಪರಿಕಲ್ಪನೆ ಯಂತೆ ಆಯೋಜನೆಗೊಂಡ ಬೈಂದೂರು ಉತ್ಸವ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ . ವೀರೇಂದ್ರ ಹೆಗ್ಡೆ ಯವರು ಬೈಂದೂರು ಜನರು ಕಲೆ ಸಾಂಸ್ಕೃತಿಕ, ಮತ್ತು ಸಾಹಿತ್ಯ ಧಾರ್ಮಿಕ ಭಜನೆ ಕಾರ್ಯಕ್ರಮ ಕ್ಷೇತ್ರದಲ್ಲಿ ಹಿಂದಿನಿಂದಲೂ ಬಹಳಷ್ಟು ಪ್ರಸಿದ್ಧಿ ಪಡೆದಿದೆ, ಹಾಗೂ ಪೌರಾಣಿಕ ಹಿನ್ನಲೆ ಇರುವ ಧಾರ್ಮಿಕ ಸ್ಥಳಗಳು ಬೈಂದೂರು ಭಾಗದಲ್ಲಿದೆ, ಶ್ರೀ ಕ್ಷೇತ್ರದ ವತಿಯಿಂದ ಬೈಂದೂರು ಭಾಗಕ್ಕೆ ಬಹಳಷ್ಟು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ನಿರಂತರ ಸಹಾಯ ಮಾಡುತ್ತಾ ಬಂದಿದ್ದೇವೆ, ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ಬದುಕು ಸಾಗಿಸಿ, ಧಾರ್ಮಿಕತೆಯನ್ನು ಉಳಿಸಿಕೊಳ್ಳಬೇಕು ಬೈಂದೂರು ಉತ್ಸವ ಬದುಕಿಗೆ ನಾಂದಿಯಾಗಲಿ ಎಂದು ಈ ಕ್ಷೇತ್ರದ ಧರ್ಮಾ ಧಿಕಾರಿ ವೀರೇಂದ್ರ ಹೆಗ್ಡೆ ಇವರು ಶನಿವಾರ ಬೈಂದೂರು ಗಾಂಧಿ ಮೈದಾನದಲ್ಲಿ ನಡೆದ ಬೈಂದೂರು ಉತ್ಸವ 2026 ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 
 ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ರವರು ಹಿಂಗಾರ ಅರಳಿಸಿ ಮಾತನಾಡಿದ ರಾಜ್ಯದಲ್ಲಿ ಅತ್ಯಂತ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಸರಕಾರದ ಯೋಜನೆಗಳನ್ನು ನೇರವಾಗಿ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಯವರು ಗ್ರಾಮೋತ್ಸವ ಮೂಲಕ ಮಾಡಿದ್ದಾರೆ ಎನ್ನುವ ಮೂಲಕ ಜನ ಮೆಚ್ಚಿದ ನಾಯಕನಾಗಿದ್ದಾರೆ ಎಂದು ಹೇಳಿದರು 
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ಬೈಂದೂರು ಕ್ಷೇತ್ರದಲ್ಲಿ ಬಹಳಷ್ಟು ಪ್ರವಾಸಿ ತಾಣಗಳು ಇದೆ ಮತ್ತು ಇತಿಹಾಸವುಳ್ಳ ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರವಾಸೋದ್ಯಮ ತಾಣಗಳು ಹೊಂದಿದೆ ಮುಂದಿನ ದಿನದಲ್ಲಿ ಪ್ರತಿ ತಾಲೂಕುಗಳಲ್ಲಿ ಉತ್ಸವ ನಡೆದರೆ ಬಹಳಷ್ಟು ಜನರಿಗೆ ಪ್ರಯೋಜನ ಕಾರಿಯಾಗುತ್ತದೆ, ಮುಂದಿನ ದಿನದಲ್ಲಿ ಬೈಂದೂರು ಕ್ಷೇತ್ರಕ್ಕೆ ಬಹಳಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ ಹಾಗೂ ಬೈಂದೂರು ಉತ್ಸವಕ್ಕೆ ಶುಭಾಶಯ ಎಂದು ಹೇಳಿದರು 
ಮುಖ್ಯ ಅತಿಥಿಗಳಾಗಿ ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕೊಡ್ಗಿ , ಕೊಲ್ಲೂರು ದೇವಸ್ಥಾನದ ಪ್ರಧಾನ ಅರ್ಚಕ ಕೆ ರಾಮಚಂದ್ರ ಅಡಿಗ, ಬೈಂದೂರು ಮಂಡಲ ಅಧ್ಯಕ್ಷ ಅನಿತಾ ಕೆ ಆರ್, ಬೈಂದೂರು ಬಿಜೆಪಿ ಮುಖಂಡ ಸುರೇಶ್ ಶೆಟ್ಟಿ, ಬೈಂದೂರು ಉತ್ಸವ ಸಮಿತಿ ಸಂಚಾಲಕ ಗಣೇಶ್ ಗಾಣಿಗ, ವೆಂಕಟೇಶ್ ಕಿಣಿ, ಸೇರಿದಂತೆ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರು, ಉದ್ಯಮಿಗಳು ಧಾರ್ಮಿಕ ಮುಖಂಡರು ಹಾಜರಿದ್ದರು
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಯವರಿಗೆ ಮತ್ತು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಯವರಿಗೆ ಬೈಂದೂರು ಉತ್ಸವ ವತಿಯಿಂದ ಸನ್ಮಾನಿಸಲಾಯಿತು

Ads on article

Advertise in articles 1

advertising articles 2

Advertise under the article