ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

A ಶಿರಸಿ PWD ರಸ್ತೆಯಲ್ಲಿ ದಾಮ್ -ಧೂಮ್  ಖಾಸಗಿ ಕಾಂಕ್ರೀಟ್*

A ಶಿರಸಿ PWD ರಸ್ತೆಯಲ್ಲಿ ದಾಮ್ -ಧೂಮ್ ಖಾಸಗಿ ಕಾಂಕ್ರೀಟ್*

ಶಿರಸಿ* :ಇದು ಶಿರಸಿ ನಗರದ ಪಿ ಡಬ್ಲ್ಯೂ ಡಿ ಇಲಾಖೆಗೆ ಒಳಪಡುವ ರಸ್ತೆ. ಸರಿಯಾಗಿ ಶಿರಸಿ ನಗರ ಸಭೆ ಎದುರುಗಡೆಯೇ ಈ ರಸ್ತೆ ಹಾದು ಹೋಗುತ್ತದೆ. ಹಾಗೆಯೇ ಈ ನಗರಸಭೆ ಕಚೇರಿ ಎದುರುಗಡೆ ಬುಲೆಟ್ ಶೋರೂಮ್ ಕಟ್ಟಡವೊಂದು ಭರ್ಜರಿಯಾಗಿ ತಲೆ ಎತ್ತುತ್ತಿದೆ. ಅಂದ ಹಾಗೆ ಕಟ್ಟಡದ ಕಾಮಗಾರಿಯೂ ಬಹುತೇಕವಾಗಿ ಮುಗಿದಿದೆ. ಆದರೆ ಅಲ್ಲಿಗೇ ಸಮಾಪ್ತಿ ಆಗಬೇಕೆಂದಿಲ್ಲವಲ್ಲ!

 ಸ್ವಲ್ಪವಾದರೂ ಸರಕಾರಿ ಇಲಾಖೆಯ ಜಾಗೆ ಉಪಯೋಗ ಪಡೆಯದಿದ್ದರೆ ಆದೀತೆ? ಸರಿ ಮಾಲೀಕ ತಲೆ ಉಪಯೋಗಿಸಿದನೋ- ಬುದ್ಧಿ ಉಪಯೋಗಿಸಿದನೋ ಗೊತ್ತಿಲ್ಲ. ಈ ಕಟ್ಟಡಕ್ಕೆ ರಸ್ತೆ ಬೇಕಲ್ಲ. ಅದಕ್ಕಾಗಿ ಎಂಟ್ರನ್ಸ್ ನ ವಿಶಾಲವಾದ ಜಾಗಕ್ಕೆ ರಸ್ತೆಯ ಪುಟ್ ಪಾತ್ ಅತಿಕ್ರಮಿಸಿ ಕಾಂಕ್ರೀಟ್ ಹಾಕಿ ಧನ್ಯಭಾವ ಮೂಡಿಸಿದ್ದಾನೆ! ಶಿರಸಿಯಲ್ಲಿ ಪಿ ಡಬ್ಲ್ಯೂ ಡಿ ಇಲಾಖೆ ಇದೆಯೇ....?ಜೈ ಹೋ ಬ್ರಷ್ಟಾಚಾರ ಯುಗಮ್!!!


Ads on article

Advertise in articles 1

advertising articles 2

Advertise under the article