ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

kundapura : ಸೇನಾಪುರ ರೈಲ್ವೆ ಗೇಟ್ ಬಳಿ ಮಕ್ಕಳ ದುಸ್ಥಿತಿ ವರದಿಗೆ ಅಧಿಕಾರಿಗಳ ತಕ್ಷಣದ ಸ್ಪಂದನೆ! COSTALNEWS ವರದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಸ್ಥಳಕ್ಕೆ ಅಧಿಕಾರಿಗಳ ಭೇಟಿ!

kundapura : ಸೇನಾಪುರ ರೈಲ್ವೆ ಗೇಟ್ ಬಳಿ ಮಕ್ಕಳ ದುಸ್ಥಿತಿ ವರದಿಗೆ ಅಧಿಕಾರಿಗಳ ತಕ್ಷಣದ ಸ್ಪಂದನೆ! COSTALNEWS ವರದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಸ್ಥಳಕ್ಕೆ ಅಧಿಕಾರಿಗಳ ಭೇಟಿ!

ಕುಂದಾಪುರ: ಸೇನಾಪುರ ರೈಲ್ವೆ ಗೇಟ್ ಸಮೀಪ ರೈಲ್ವೆ ಟ್ರ್ಯಾಕ್ ಬಳಿ ಟೆಂಟ್‌ಗಳಲ್ಲಿ ವಾಸವಿದ್ದ ವಲಸೆ ಕಾರ್ಮಿಕರ ಮಕ್ಕಳ ದುಸ್ಥಿತಿಯ ಕುರಿತು COSTALNEWS ಮಾಧ್ಯಮದಲ್ಲಿ ವರದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೇನಾಪುರ ರೈಲ್ವೆ ಟ್ರ್ಯಾಕ್ ಬಳಿ ಪೋಷಕರೊಂದಿಗೆ ವಾಸವಿದ್ದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಅವರ ಸುರಕ್ಷತೆಗೂ ಅಪಾಯವಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಮೌಖಿಕ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ, ಸಾಂಸ್ಥಿಕ ರಕ್ಷಣಾಧಿಕಾರಿ ಮಹೇಶ್ ದೇವಾಡಿಗ, ಸಮಾಜ ಕಾರ್ಯಕರ್ತ ಪ್ರಜ್ವಲ್, ಮಕ್ಕಳ ಸಹಾಯವಾಣಿಯ ಯೋಜನಾ ಸಂಯೋಜಕಿ ಜ್ಯೋತಿ, ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕಿ ಸಿಂಧು, ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ, ಹೊಸಾಡು ಗ್ರಾಮ ಪಂಚಾಯತ್ ಸಿಬ್ಬಂದಿ ಶಿವಾನಂದ, ಗಂಗೊಳ್ಳಿ ಪೊಲೀಸ್ ಠಾಣೆಯ ಪವನ್ ನಾಯಕ್ ಹಾಗೂ ಪೊಲೀಸ್ ಸಿಬ್ಬಂದಿ, ಕರವೇ ಸೈನಿಕರು ಮತ್ತು ಸಾರ್ವಜನಿಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಕ್ಕಳನ್ನು ಅವರ ತಾಯಂದಿರೊಂದಿಗೆ ಸ್ವಗ್ರಾಮಕ್ಕೆ ಕಳುಹಿಸುವ ಕ್ರಮ ಕೈಗೊಳ್ಳಲಾಯಿತು. ರೈಲ್ವೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಪುರುಷ ಕಾರ್ಮಿಕರಿಗೆ ಕಾಮಗಾರಿಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಲಾಯಿತು ಎಂದು ತಿಳಿದುಬಂದಿದೆ.
COSTALNEWS ವರದಿಗೆ ತ್ವರಿತ ಸ್ಪಂದನೆ!
ಮಕ್ಕಳ ಶಿಕ್ಷಣ, ಸುರಕ್ಷತೆ ಮತ್ತು ಭವಿಷ್ಯದ ದೃಷ್ಟಿಯಿಂದ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜನರ ಸಮಸ್ಯೆಗಳಿಗೆ ಧ್ವನಿಯಾಗುವ COSTALNEWS ವರದಿ ಪ್ರಸಾರವಾದ ಬೆನ್ನಲ್ಲೇ ಅಧಿಕಾರಿಗಳು ಸ್ಪಂದಿಸಿರುವುದು ಗಮನಾರ್ಹವಾಗಿದೆ.
COSTALNEWS — ನಿಮ್ಮ ಸುದ್ದಿ, ನಿಮ್ಮ ಧ್ವನಿ!

Ads on article

Advertise in articles 1

advertising articles 2

Advertise under the article