ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS / ಲಂಚ..ಲಂಚ.. ಲಂಚ....🤭ಎಲ್ ಕಂಡ್ರೂ *ಲಂಚ*   ಇದಕ್ಕೆ ಕೊನೆಯೆಲ್ಲಿ? ನವೆಂಬರ್ ಒಳಗೆ ಬಾಕಿ ಬಿಲ್ ಬಿಡುಗಡೆಯಾಗದಿದ್ರೆ, ಲಂಚ ಪಡೆದ ಶಾಸಕರ ಹೆಸರನ್ನು ಬಹಿರಂಗ ಪಡಿಸೋದಾಗಿ ಗುತ್ತಿಗೆದಾರರು ಎಚ್ಚರಿಕೆ..!

COSTALNEWS / ಲಂಚ..ಲಂಚ.. ಲಂಚ....🤭ಎಲ್ ಕಂಡ್ರೂ *ಲಂಚ* ಇದಕ್ಕೆ ಕೊನೆಯೆಲ್ಲಿ? ನವೆಂಬರ್ ಒಳಗೆ ಬಾಕಿ ಬಿಲ್ ಬಿಡುಗಡೆಯಾಗದಿದ್ರೆ, ಲಂಚ ಪಡೆದ ಶಾಸಕರ ಹೆಸರನ್ನು ಬಹಿರಂಗ ಪಡಿಸೋದಾಗಿ ಗುತ್ತಿಗೆದಾರರು ಎಚ್ಚರಿಕೆ..!

ಬೆಂಗಳೂರು : ಮಾನ್ಯ ಗುತ್ತಿಗೆದಾರರೇ, ಹಾಗೂ ಸನ್ಮಾನ್ಯ ಶಾಸಕರೇ, ನೆನಪಿರಲಿ ನೀವಿಬ್ಬರೂ ಗಾಜಿನ ಮನೆಯಲ್ಲಿ ವಾಸಮಾಡೋರು. ನಿಮ್ಮಿಬ್ಬರಲ್ಲಿ ಯಾರು ಬಾಯಿಬಿಟ್ಟರೂ, ಇಬ್ಬರ ಬಂಡವಾಳವೂ ಹೊರಬೀಳುತ್ತೆ. ಕಾನೂನು ಹೇಳುತ್ತೇ, ಲಂಚ ಪಡೆಯೋದು ತಪ್ಪು, ಹಾಗೇ ಲಂಚ ಕೊಡೋದೂ ತಪ್ಪು ಅಂತ. ಇಬ್ಬರೂ ಶಿಕ್ಷೆಗೆ ಅರ್ಹರು. ಗುತ್ತಿಗೆದಾರರು ಈ ರೀತಿ ಎಚ್ಚರಿಕೆ ನೀಡಿ ನಮ್ಮ ರಾಜ್ಯದಲ್ಲಿ ಲಂಚ/ಕಮಿಷನ್ ಎಂಬ ಭ್ರಹ್ಮಾಂಡ ಭ್ರಷ್ಟಾಚಾರ ಇದೆ ಅಂತ ಒಪ್ಕೊಂಡ ಹಾಗಾಯಿತು. ಗುತ್ತಿಗೆದಾರರು ಸುಮ್ ಸುಮ್ನೆ ಲಂಚ ಕೊಡ್ತಾರೆಯೇ? 5 ಲಕ್ಷದಲ್ಲಿ ಆಗೋ ಕೆಲಸಕ್ಕೆ 10 ಲಕ್ಷ ಬಿಲ್ ಹಾಕಿ ಅದ್ರಲ್ಲಿ 2-3 ಲಕ್ಷ ಲಂಚ ಕೊಟ್ಟು, Tender ಪಡೀತಾರೆ. ಲಂಚ ಪಡೆದವರು ಹಣ ಕಿಸೆಗೆ ಹಾಕ್ಕೊಂಡು ಈ ಕಡೆ ತಿರುಗಿ ಸಹ ನೋಡಲ್ಲ. ಖಜಾನೆಯಲ್ಲಿ ಹಣ ಇಲ್ಲ ಅಂತಲೋ, ಕೊಟ್ಟಿದ್ದು ಇನ್ನೂ ಸಾಕಾಗಿಲ್ಲ ಅಂತಲೋ, ಇಲ್ಲ, ಅದ್ರಲ್ಲಿ ನಮಗೆ ಪಾಲು ಬಂದಿಲ್ಲ ಅಂತಲೋ ಬಿಲ್ ಪಾಸ್ ಮಾಡೋರು Payment Pending ಇಡ್ತಾರೆ. ಇನ್ನು ಕೆಲವೊಮ್ಮೆ Audit ನಲ್ಲಿ ಇವರ ಕಳ್ಳಾಟ ಬಯಲಾಗಿ, ತನಿಖಾಧಿಕಾರಿಗಳು Bill Suspend ನಲ್ಲಿ ಇಡ್ತಾರೆ. ಈ ಕಡೆ ಸಾಲಸೋಲ ಮಾಡಿ, Tender ಪಡೆಯಲು ಲಂಚಾನೂ ನೀಡಿ Bill ಪಾಸ್ ಆಗ್ದಿದ್ರೆ ಗುತ್ತಿಗೆದಾರರ ಗತಿ ಏನಾಗ್ಬೇಕು ಹೇಳಿ? ಬೊಬ್ಬೆ ಹೊಡೆಯೋದೊಂದೇ ಬಾಕಿ. ಲಂಚ ಪಡೆಯೋರು ಬುದ್ಧಿವಂತರು. ಪಡೆದ ಬಗ್ಗೆ ಯಾವ ಸಾಕ್ಷಿನೂ ಬಿಟ್ಟಿರಲ್ಲ. ಆದ್ರೆ ಲಂಚ ಕೊಡೋದು ತಪ್ಪು ಅಂತ ಗೊತ್ತಿದ್ದೂ ಹೊಂಡಕ್ಕೆ ಬೀಳ್ತಾರಲ್ಲ, ಅಂತಹ ಗುತ್ತಿಗೆದಾರರಿಗೆ ಏನ್ಹೇಳ್ಬೇಕೋ ಅಂತ ತೋಚ್ತಾ ಇಲ್ಲ. ಇಲ್ಲಿ ಬಂಡವಾಳ ಹೊರಬಿದ್ರೆ ಲಂಚ ಕೊಟ್ಟೋರಿಗೂ, ಲಂಚ ಇಸ್ಕೊಂಡೋರಿಗೂ, ಇಬ್ಬರಿಗೂ ಶಿಕ್ಷೆ ಆಗಬೇಕು. ಅಪರಾಧಿಗಳಿಗೆ ಶಿಕ್ಷೆ ಆದ್ರೆ, ಮುಂದೆ ಆಗ್ಬಹುದಾದ ಅವ್ಯವಹಾರಕ್ಕೆ ತಡೆ ಬೀಳಬಹುದು. ಇಂದಿನ ಕಾನೂನು ವ್ಯವಸ್ಥೆಯಲ್ಲಿ ಇದನ್ನು ನಿರೀಕ್ಷಿಸಬಹುದೇ? ಯಾರಿಗೆ? ಎಲ್ಲಿ? ಯಾವಾಗ? ಏನು? ಶಿಕ್ಷೆ ಆಯ್ತು ಅಂತ ನಮಗ್ಯಾರಿಗೂ ಗೊತ್ತಾಗೋದೇ ಇಲ್ಲ. ಹಾಗಾಗಿ ಇಂಥಹವುಗಳು ಅಲ್ಲಲ್ಲಿ, ಆಗಾಗ ನಡೆಯುತ್ತಲೇ ಇರುತ್ವೆ. ನಾವ್ ನೀವ್ ಈ ಬಗ್ಗೆ ಮುಂದೇನೂ ಮಾತಾಡ್ತಾನೇ ಇರ್ತೇವೆ. ಮನುಷ್ಯ ಎಂಬ ಪ್ರಾಣಿ ಈ ಜಗತ್ತಿನಲ್ಲಿ ಇರೋವರೆಗೂ ಈ ಲಂಚಾವತಾರ ನಿಲ್ಲಲ್ಲ ಅನ್ಸುತ್ತೆ. ಇಂದು ಯಾವುದೇ ಸರ್ಕಾರಿ ಖಚೇರಿಗೆ ಹೋದ್ರೂ, ಲಂಚ ಕೊಡದೇ ಕೆಲ್ಸ ಆಗಲ್ಲ. ಹೆಚ್ಚಿನೆಡೆ ಲಂಚ ಪಡೆದು ಸಮ್ಮಂಧ ಪಟ್ಟವರಿಗೆ ತಲುಪಿಸೋ ವ್ಯವಸ್ಥಿತ ಜಾಲ ಇದೆ. ಅದನ್ನು ಅವ್ರು Business ಅಂತಾರೆ, ಸ್ವ ಉದ್ಯೋಗ ಅಂತಾರೆ. ಇತ್ತೀಚೆಗೆ ಲೋಕಾಯುಕ್ತ ದಾಳಿ ಮಾಡಿದ ಎಲ್ಲಾ ಕಡೆ ಕೋಟಿಗಟ್ಟಲೆ ಹಣ, ಚಿನ್ನ, ಆಸ್ತಿ ಸಿಕ್ಕಿ, ಅಧಿಕಾರಿಗಳ ಮಾನ-ಮರ್ಯಾದೆ ಬೀದಿಪಾಲಾಗಿದೆ, ಅಷ್ಟಾದ್ರೂ ಲಂಚ ನಿಂತಿಲ್ಲ. ಅವ್ರೆಲ್ಲ ಸಿಕ್ಕಿಬಿದ್ದಿರ ಬಹುದು, ನಾನು ಸಿಕ್ಕಿಬೀಳಲ್ಲ ಅನ್ನೋ ಧ್ರಢ ಆತ್ಮ ವಿಶ್ವಾಸವೋ? ಭಂಡ ಧೈರ್ಯವೋ? ಏನೋ ತಿಳಿತಾ ಇಲ್ಲ. ಕೆಲವೆಡೆ ಜನರೂ ಲಂಚ ಕೊಡೋದನ್ನ ಬೆಂಬಲಿಸ್ತಾರೆ. ಬೇಗ ಕೆಲ್ಸ ಆಗುತ್ತೆ, ಕಮ್ಮಿಯಲ್ಲಿ ಆಗುತ್ತೆ, ಅದು ಕಾನೂನಿಗೆ ವಿರೋಧವಾದ್ರೂ ಸರಿ, ಸರ್ಕಾರದ ಬೊಕ್ಕಸಕ್ಕೆ 
ನಷ್ಟವಾದ್ರೂ ಸರಿ, ನನಗೆ ಲಾಭ ಆದ್ರೆ ಸಾಕು ಎಂಬ ಮನೋಭಾವ. ಇಷ್ಟೆಲ್ಲಾ Back Support ಇರೋವಾಗ, ಕಟ್ಟ ಕಡೆಯ ಮನುಷ್ಯನಿಂದ ಹಿಡಿದು, ಉನ್ನತ ಸ್ಥಾನದಲ್ಲಿರೋ ಅಧಿಕಾರಿಗಳು, ನಮ್ಮನ್ನಾಳೋ ರಾಜಕಾರಣಿಗಳಲ್ಲಿ ಈ ಲಂಚಾಸುರ ಹಾಸುಹೊಕ್ಕಾಗಿರೋವಾಗ ಅದನ್ನು ಅಷ್ಟು ಸುಲಭವಾಗಿ ಓದ್ದೋಡಿಸಲು ಸಾಧ್ಯವೇ? ಬಹುಷಃ ಸಂಪೂರ್ಣ ಪ್ರಳಯ ಸಂಭವಿಸಬೇಕೇನೋ*? ಆದ್ರೂ ಒಂದಲ್ಲಾ ಒಂದು ದಿನ ಈ ಕೆಟ್ಟ System ಬದಲಾಗುತ್ತೆ ಎಂಬ ಸಣ್ಣ ಆಸೆ ಮನದ ಮೂಲೆಯಲ್ಲಿದೆ. ಕಾದು ನೋಡೋಣ.

   
  ✍️      
ವರದಿ :ನಂದಾ ಕುಂದಾಪುರ 

Ads on article

Advertise in articles 1

advertising articles 2

Advertise under the article