ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS/ BIG BREAKING NEWS ಉಡುಪಿ ತಾಲೂಕು ಪಂಚಾಯತ್ ಇಒ (EO) ಜಿ.ಪಂ.CEO ಆದೇಶ ಉಲ್ಲಂಘನೆಗೆ ಬೆಂಬಲ ನೀಡಿದ ಆರೋಪ..!

COSTALNEWS/ BIG BREAKING NEWS ಉಡುಪಿ ತಾಲೂಕು ಪಂಚಾಯತ್ ಇಒ (EO) ಜಿ.ಪಂ.CEO ಆದೇಶ ಉಲ್ಲಂಘನೆಗೆ ಬೆಂಬಲ ನೀಡಿದ ಆರೋಪ..!

ಉಡುಪಿ ಜಿಲ್ಲಾ ಪಂಚಾಯತ್ CEO ಅವರ ಅಧಿಕೃತ ಆದೇಶಕ್ಕೆ ಬೆಲೆ ಇಲ್ಲವೇ? ಮೇಲಧಿಕಾರಿಗಳ ಆದೇಶವನ್ನೇ ಪಾಲಿಸದ ನೌಕರನ ವಿರುದ್ಧ ಕ್ರಮ ಕೈಗೊಳ್ಳಬೇಕಾದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (EO) ಮೌನ ವಹಿಸಿರುವುದೇಕೆ? ಉಡುಪಿ ತಾಲೂಕು ಪಂಚಾಯತ್ ಆಡಳಿತದ ಕಾರ್ಯವೈಖರಿ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ!
ಜಿಲ್ಲಾ ಪಂಚಾಯತ್ CEO ಅವರು ಸಿಬ್ಬಂದಿಯ ನಿಯೋಜನೆಗೆ ಸಂಬಂಧಿಸಿದಂತೆ ಸ್ಪಷ್ಟ ಆದೇಶ ಹೊರಡಿಸಿದ್ದರೂ, ನಿಯೋಜಿತ ಸ್ಥಳಕ್ಕೆ ನೌಕರ ಹಾಜರಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ತಾಲೂಕು ಪಂಚಾಯತ್ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ನೌಕರನ ಗೈರುಹಾಜರಿಯನ್ನು ದಾಖಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕಾದ EO ಅವರು ಈವರೆಗೆ ಯಾವ ಕ್ರಮ ಕೈಗೊಂಡಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಮೇಲಧಿಕಾರಿಗಳ ಆದೇಶದ ಅನುಷ್ಠಾನದಲ್ಲಿ ವಿಳಂಬವೇಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ!
ಇನ್ನೊಂದೆಡೆ, ಕರ್ತವ್ಯ ನಿರ್ವಹಿಸದೆ ಇರುವ ಅವಧಿಗೂ ವೇತನ ಪಾವತಿಯಾಗಿದೆಯೇ? ಹಾಗಿದ್ದರೆ, ಅದಕ್ಕೆ ಅನುಮೋದನೆ ನೀಡಿದವರು ಯಾರು? ಸಾರ್ವಜನಿಕರ ತೆರಿಗೆ ಹಣದ ಪಾವತಿಯಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ? ಎಂಬ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಈ ಕುರಿತು ದಾಖಲೆಗಳ ಪರಿಶೀಲನೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕೆಂಬ ಆಗ್ರಹ ಕೇಳಿಬಂದಿದೆ. EO ಅವರ ಮೌನದ ಹಿಂದೆ ಯಾವುದಾದರೂ ಆಡಳಿತಾತ್ಮಕ ಕಾರಣವಿದೆಯೇ ಎಂಬುದಕ್ಕೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.
ಜಿಲ್ಲಾ ಪಂಚಾಯತ್ CEO ಆದೇಶಕ್ಕೆ ಬೆಲೆ ಇಲ್ಲವೇ? ಕರ್ತವ್ಯಲೋಪದ ಆರೋಪಗಳ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ, ತಪ್ಪು ಸಾಬೀತಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಆರೋಪಗಳಿಗೆ ಉಡುಪಿ ತಾಲೂಕು ಪಂಚಾಯತ್ EO ಹಾಗೂ ಸಂಬಂಧಪಟ್ಟ ನೌಕರರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Ads on article

Advertise in articles 1

advertising articles 2

Advertise under the article