ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS / ಮನೆ-ಮನಗಳಲ್ಲಿ ಗೌರಿ-ಗಣೇಶ ಹಬ್ಬವು ಮತ್ತಷ್ಟು ಸಂಭ್ರಮ, ಶಾಂತಿ, ಸಮೃದ್ಧಿಗಳನ್ನು ತರಲಿ:_ ಸಂಸದ ಬಿ.ವೈ.ರಾಘವೇಂದ್ರ

COSTALNEWS / ಮನೆ-ಮನಗಳಲ್ಲಿ ಗೌರಿ-ಗಣೇಶ ಹಬ್ಬವು ಮತ್ತಷ್ಟು ಸಂಭ್ರಮ, ಶಾಂತಿ, ಸಮೃದ್ಧಿಗಳನ್ನು ತರಲಿ:_ ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ: ನಾಡಿನ ಸಮಸ್ತ ಜನತೆಗೆ, ವಿಶೇಷವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಸ್ತ ನಾಗರಿಕರಿಗೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರು ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ವಿಘ್ನಗಳನ್ನು ದೂರ ಮಾಡಿ, ಹೊಸ ಭರವಸೆಗಳಿಗೆ, ಹೊಸ ಆಶಯಗಳಿಗೆ ದಾರಿ ತೋರುವ ಗಣಪತಿಯ ಕೃಪೆ ಎಲ್ಲರ ಮೇಲಿರಲಿ, ಈ ಗೌರಿ-ಗಣೇಶ ಹಬ್ಬವು ಪ್ರತಿಯೊಬ್ಬರ ಬದುಕಿನಲ್ಲಿ ಸಂತೋಷ, ನೆಮ್ಮದಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಬ್ಬದ ಹಾರೈಕೆಗಳನ್ನು ತಿಳಿಸಿದ್ದಾರೆ.
"ಗೌರಿ ತೃತೀಯ ಮತ್ತು ಗಣೇಶ ಚತುರ್ಥಿ ಹಬ್ಬ, ಜಗನ್ಮಾತೆಯ ಮತ್ತು ಸಿದ್ದಿ ವಿನಾಯಕನ ವಿಶೇಷ ಪೂಜೆ, ಪ್ರಾರ್ಥನೆಗಳ ಜೊತೆಗೆ ನಮ್ಮ ಮನೆ-ಮನಗಳನ್ನು ಬೆಸೆಯುವ, ಕುಟುಂಬದ ಬಂಧವನ್ನು ಗಟ್ಟಿಗೊಳಿಸುವ ಹಾಗೂ ನಮ್ಮ ಸಂಸ್ಕೃತಿ, ಪರಂಪರೆಯ ಸೊಬಗನ್ನು ಸಾರುವ ಪವಿತ್ರ ಹಬ್ಬ. ತಾಯಿ ಗೌರಿಯ ಕೃಪೆ ಹಾಗೂ ವಿಘ್ನವಿನಾಯಕ ಗಣಪತಿಯ ಅನುಗ್ರಹದಿಂದ ಪ್ರತಿಯೊಂದು ಕುಟುಂಬದಲ್ಲೂ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ. ವಿಶೇಷವಾಗಿ, ಬರಗಾಲ, ಮಳೆಯ ಕೊರತೆಯಿಂದ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಯ ರೈತರು ಹಾಗೂ ಜನತೆಯ ಸಂಕಷ್ಟಗಳು ಬೇಗನೆ ಪರಿಹಾರವಾಗಲಿ, ವಿನಾಯಕನ ಕೃಪೆಯಿಂದ ಉತ್ತಮ ಮಳೆಯಿಂದ ಜನರು, ಜಾನವಾರುಗಳಿಗೆ ಸಮೃದ್ಧಿ ಮತ್ತು ನೆಮ್ಮದಿ ದೊರೆಯಲಿ, ನಾಡು ಹಸಿರಿನಿಂದ ಕಂಗೊಳಿಸಲಿ ಎಂದು ಸಂಸದರು ಹೇಳಿದ್ದಾರೆ.

ಶಿವಮೊಗ್ಗ ಸೇರಿದಂತೆ ಮಲೆನಾಡಿನಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ, ಭಕ್ತಿ-ಭಾವದಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಂದು ಕುಟುಂಬಕ್ಕೂ ನನ್ನ ಭಕ್ತಿಪೂರ್ವಕ ಶುಭಕಾಮನೆಗಳು. ನಮ್ಮ ಗ್ರಾಮ, ಊರು, ಜಿಲ್ಲೆ ಮತ್ತು ನಮ್ಮ ನಾಡಿನ ಅಭಿವೃದ್ಧಿ, ನಮ್ಮ ರೈತರು ಮತ್ತು ದುಡಿಯುವ ಜನರ ಬದುಕಿನಲ್ಲಿ ಇನ್ನಷ್ಟು ಬೆಳಕು, ಯುವಜನರಿಗೆ ಹೊಸ ಅವಕಾಶಗಳು, ಮಹಿಳೆಯರಿಗೆ ಹೆಚ್ಚಿನ ಶಕ್ತಿ ಹಾಗೂ ನಮ್ಮ ಶಿವಮೊಗ್ಗದ ಸಮಗ್ರ ಪ್ರಗತಿಗೆ ಈ ಹಬ್ಬ ಹೊಸ ಶುಭಾರಂಭದ ಸಂಕೇತವಾಗಲಿ ಎಂದು ಸಂಸದ ರಾಘವೇಂದ್ರ ಹಾರೈಸಿದ್ದಾರೆ. ಹಾಗೆಯೇ, ಸಾರ್ವಜನಿಕವಾಗಿ ಗೌರಿ-ಗಣೇಶ ಹಬ್ಬವನ್ನು ಭಕ್ತಿ-ಸಂಭ್ರಮಗಳಿಂದ ಎಲ್ಲರೂ ಕೂಡಿ ಹೆಮ್ಮೆಯಿಂದ ಆಚರಿಸೋಣ, ಈ ಹಬ್ಬ ಸಮಾಜದಲ್ಲಿ ಏಕತೆ, ಸಹೋದರತ್ವ ಮತ್ತು ಸೌಹಾರ್ದತೆಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿ ಎಂದು ಸಂಸದರು ಶುಭ ಕೋರಿದ್ದಾರೆ.

Ads on article

Advertise in articles 1

advertising articles 2

Advertise under the article