ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS  BIG BREAKING /ಕುಂದಾಪುರ: ಕೋಸ್ಟಲ್ ತಡ್ಕ ಹೋಟೆಲ್‌ಗೆ ಫುಡ್ ಸೇಫ್ಟಿ ಅಧಿಕಾರಿಗಳ ದಿಢೀರ್ ಭೇಟಿ..!

COSTALNEWS BIG BREAKING /ಕುಂದಾಪುರ: ಕೋಸ್ಟಲ್ ತಡ್ಕ ಹೋಟೆಲ್‌ಗೆ ಫುಡ್ ಸೇಫ್ಟಿ ಅಧಿಕಾರಿಗಳ ದಿಢೀರ್ ಭೇಟಿ..!

ಕುಂದಾಪುರ ಪುರಸಭೆ ವ್ಯಾಪ್ತಿಯ ಖಾಸಗಿ ಹೊಸ ಬಸ್ ನಿಲ್ದಾಣದ ಸಮೀಪದ ವಿನಾಯಕ ಗ್ರಾಂಡ್ ಕಟ್ಟಡದಲ್ಲಿರುವ ಕೋಸ್ಟಲ್ ತಡ್ಕ ಹೋಟೆಲ್‌ಗೆ ಆಹಾರ ಸುರಕ್ಷತಾ ಅಧಿಕಾರಿ ವಿವೇಕ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಹೋಟೆಲ್‌ನಲ್ಲಿ ಬಳಸಲಾಗುತ್ತಿರುವ ಆಹಾರದ ಗುಣಮಟ್ಟ, ಆಹಾರ ಸುರಕ್ಷತಾ ನಿಯಮಗಳ ಪಾಲನೆ ಹಾಗೂ ಅಗತ್ಯ ಪರವಾನಿಗೆ ಮತ್ತು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮ್ ಒನ್ ಮೂಲಕ ಪಡೆದಿದ್ದ ಆಹಾರ ಪರವಾನಿಗೆಗೆ ಸಂಬಂಧಿಸಿದ ದಾಖಲೆಗಳ ಕುರಿತು ಪರಿಶೀಲನೆ ನಡೆಸಲಾಗಿದ್ದು, ಪರವಾನಿಗೆಗೆ ಸಂಬಂಧಿಸಿದ ಕ್ರಮ ಕೈಗೊಂಡು, ಅಗತ್ಯವಿರುವ ಸಂಪೂರ್ಣ ದಾಖಲೆಗಳನ್ನು ಏಳು ದಿನಗಳೊಳಗಾಗಿ ಕಚೇರಿಗೆ ಹಾಜರುಪಡಿಸುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹೋಟೆಲ್ ಹಾಗೂ ಆಹಾರ ಮಳಿಗೆಗಳಲ್ಲಿ ನಿಯಮಗಳ ಪಾಲನೆ ಅತ್ಯಂತ ಮಹತ್ವದ್ದು.
ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಈ ದಿಢೀರ್ ಪರಿಶೀಲನೆಯಿಂದ ಕುಂದಾಪುರ ಪುರಸಭೆ ವ್ಯಾಪ್ತಿಯ ಹೋಟೆಲ್ ಮಾಲೀಕರಲ್ಲೂ ನಿಯಮ ಪಾಲನೆಯ ಕುರಿತು ಚರ್ಚೆ ಆರಂಭವಾಗಿದೆ.
ಮುಂದಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯ ಇತರೆ ಹೋಟೆಲ್‌ಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂಬ ಸಂದೇಶವನ್ನು ಆಹಾರ ಸುರಕ್ಷತಾ ಇಲಾಖೆ ನೀಡಿದೆ ಎಂದು ತಿಳಿದುಬಂದಿದೆ.
ಇದೀಗ ಸಾರ್ವಜನಿಕರ ಗಮನವೆಲ್ಲಾ ಏಳು ದಿನಗಳತ್ತ..!
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
 ಏಳು ದಿನಗಳ ಬಳಿಕದ ಫಲಿತಾಂಶದತ್ತ ಸಾರ್ವಜನಿಕರ ಚಿತ್ತ..!

Ads on article

Advertise in articles 1

advertising articles 2

Advertise under the article