COSTALNEWS BIG BREAKING | XXCLUSIVE ಕೊಲ್ಲೂರು: ಹಾಲ್ಕಲ್ ಚಾರ್ಸಲು ಬಳಿ 2 ಕೊಳೆತ ಶವ ಪತ್ತೆ..!
Tuesday, September 29, 2026
ಒಂದೇ ಮರದ ಕೊಂಬೆಗೆ ನೇತಾಡಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದ್ದು, ಮೃತರನ್ನು ವಿಠ್ಠಲ ನಾಯ್ಕ ಹಾಗೂ ಮತ್ತೋರ್ವ ಮಹಿಳೆ ಎಂದು ಗುರುತಿಸಲಾಗಿದೆ ಎನ್ನಲಾಗಿದೆ.
ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಕ್ರಮ ಸಂಬಂಧದ ಗುಸುಗುಸು ಸ್ಥಳೀಯವಾಗಿ ಕೇಳಿಬರುತ್ತಿದ್ದರೂ, ಇದಕ್ಕೆ ಯಾವುದೇ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.
ನಿಜಕ್ಕೂ ಇಬ್ಬರ ಸಾವಿಗೆ ಕಾರಣವೇನು? ಇದು ಆತ್ಮಹತ್ಯೆಯೇ ಅಥವಾ ಪ್ರಕರಣದ ಹಿಂದೆ ಬೇರೆ ಕಾರಣವಿದೆಯೇ? ಎಂಬ ಪ್ರಶ್ನೆಗಳು ಇದೀಗ ಮೂಡಿವೆ.
ಘಟನೆಯ ಸಂಪೂರ್ಣ ಸತ್ಯ ಕೊಲ್ಲೂರು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ. ಹೆಚ್ಚಿನ ಮಾಹಿತಿ
ಸ್ಥಳಕ್ಕೆ ಬೈಂದೂರು ವ್ರತ ನಿರೀಕ್ಷಕರಾದ ಶಿವಕುಮಾರ್, ಬೈಂದೂರು ಪೊಲೀಸ್ ಠಾಣಾಧಿಕಾರಿ ಸುನಿಲ್, ಕೊಲ್ಲೂರು ಪೊಲೀಸ್ ಠಾಣಾಧಿಕಾರಿ ವಿನಯ್ ಕೊರಲಹಳ್ಳಿ,ಉಡುಪಿ ಜಿಲ್ಲಾ ಪೊಲೀಸ್ ವಿಧಿ ವಿಜ್ಞಾನ ವಿಭಾಗ, ಬೆರಳಚ್ಚು ವಿಭಾಗ ಹಾಗೂ ಸೋಕೋ ತಂಡ ಕಾರ್ಯಚರಣೆಯಲ್ಲಿ ಹಾಜರಿದ್ದರು
ವರದಿ : ಉದಯ್ ನಾಯ್ಕ್ ಗಂಗನಾಡು ಬೈಂದೂರು