ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS BIG BREAKING ಗಂಗೊಳ್ಳಿಯಲ್ಲಿ ಮಟ್ಕಾ ಜುಗಾರಿ ದಂಧೆ ಅಡ್ಡೆ ಮೇಲೆ ಪೊಲೀಸರ ದಾಳಿ..!ಓರ್ವ ಬಂಧನ – ₹750 ನಗದು, ಮಟ್ಕಾ ಪಟ್ಟಿ, ಪುಸ್ತಕ–ಪೆನ್ನು ವಶ..!

COSTALNEWS BIG BREAKING ಗಂಗೊಳ್ಳಿಯಲ್ಲಿ ಮಟ್ಕಾ ಜುಗಾರಿ ದಂಧೆ ಅಡ್ಡೆ ಮೇಲೆ ಪೊಲೀಸರ ದಾಳಿ..!ಓರ್ವ ಬಂಧನ – ₹750 ನಗದು, ಮಟ್ಕಾ ಪಟ್ಟಿ, ಪುಸ್ತಕ–ಪೆನ್ನು ವಶ..!

ಕುಂದಾಪುರ:
ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ರಥಬೀದಿ ಬದಿಯ ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಟ್ಕಾ ಜುಗಾರಿ ದಂಧೆ ನಡೆಯುತ್ತಿದೆ ಎಂಬ ಸಾರ್ವಜನಿಕ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಗಂಗೊಳ್ಳಿ ಬೀಟ್ ಪೊಲೀಸ್ ರಾಘವೇಂದ್ರ ಶೆಟ್ಟಿ ಅವರು ಮಾಹಿತಿ ಪರಿಶೀಲಿಸಿದ ಬಳಿಕ, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ಹಾಗೂ ತನಿಕಾ ವಿಭಾಗದ psi  ಸುದರ್ಶನ್ ರವರ ನೇತೃತ್ವದಲ್ಲಿ ಮಟ್ಕಾ ದಂಧೆ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಉದಯ್ ದೇವಾಡಿಗ ಎಂಬಾತನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ದಾಳಿ ವೇಳೆ ₹750 ನಗದು, ಮಟ್ಕಾ ಪಟ್ಟಿ, ದಂಧೆಯ ಲೆಕ್ಕ ಬರೆಯಲು ಬಳಸುತ್ತಿದ್ದ ಪುಸ್ತಕ, ಪೆನ್ನು ಸೇರಿದಂತೆ ಜುಗಾರಿ ದಂಧೆಗೆ ಸಂಬಂಧಿಸಿದ ಹಲವು ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಈ ಮಟ್ಕಾ ದಂಧೆಯ ಹಿಂದೆ ನಾರಾಯಣ ಪೂಜಾರಿ ಉಳ್ಳಪ್ಪ ಎಂಬ ವ್ಯಕ್ತಿಯ ಹೆಸರು ಕೇಳಿಬರುತ್ತಿದೆ( ಹೆಸರು ಬದಲಾಯಿಸಲಾಗಿದೆ)ಎಂದು ಸಾರ್ವಜನಿಕ ವಲಯದಲ್ಲಿ ಮಾಹಿತಿ ಹರಿದಾಡುತ್ತಿದೆ. ಈ ಆರೋಪದ ಬಗ್ಗೆ ಅಧಿಕೃತ ಪೊಲೀಸ್ ದೃಢೀಕರಣ ಲಭ್ಯವಾಗಬೇಕಿದೆ.
ಅಕ್ರಮ ಜುಗಾರಿ ದಂಧೆಗೆ ಕಡಿವಾಣ ಹಾಕಲು ಗಂಗೊಳ್ಳಿ ಪೊಲೀಸರು ನಡೆಸಿದ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ.
ಮಟ್ಕಾ ದಂಧೆಯ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ?
ದಂಧೆಯ ಪ್ರಮುಖ ಸೂತ್ರಧಾರ ಯಾರು?
ಈ ಕುರಿತು ಪೊಲೀಸರ ತನಿಖೆಯಿಂದ ಮತ್ತಷ್ಟು ಮಾಹಿತಿ ಹೊರಬರಬೇಕಿದೆ.

Ads on article

Advertise in articles 1

advertising articles 2

Advertise under the article