ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS ಕುಂದಾಪುರ: ಮನೆಯ ಎದುರುಗಡೆ  ಗಿಡ ತೆಗೆಯದಂತೆ ಹೇಳಿದ್ದಕ್ಕೆ ಮಹಿಳೆಗೆ ಹಲ್ಲೆ : ಇಬ್ಬರ ವಿರುದ್ಧ ಪ್ರಕರಣ ದಾಖಲು…!!

COSTALNEWS ಕುಂದಾಪುರ: ಮನೆಯ ಎದುರುಗಡೆ ಗಿಡ ತೆಗೆಯದಂತೆ ಹೇಳಿದ್ದಕ್ಕೆ ಮಹಿಳೆಗೆ ಹಲ್ಲೆ : ಇಬ್ಬರ ವಿರುದ್ಧ ಪ್ರಕರಣ ದಾಖಲು…!!

ಕುಂದಾಪುರದಲ್ಲಿ ಗಿಡ ತೆಗೆಯದಂತೆ ಪುರಸಭೆ ಸಿಬ್ಬಂದಿಗೆ ತಿಳಿಸಿದ್ದಕ್ಕೆ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಕುಂದಾಪುರದ ಚರ್ಚ್‌ ರೋಡ್‌ನ ನಿವಾಸಿ ಅನಿತಾ ಶೇಟ್‌ (47) ಅವರು ಆಗಸ್ಟ್‌ 28ರಂದು ಬೆಳಗ್ಗೆ 10:15ರ ಸುಮಾರಿಗೆ ಮನೆಯಲ್ಲಿದ್ದರು. ಈ ವೇಳೆ ಪುರಸಭೆ ಸಿಬ್ಬಂದಿ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲು ಆಗಮಿಸಿದ್ದರು.
ಮನೆಯ ಎದುರಿನ ಕ್ರೊಟಾನ್ ಗಿಡವನ್ನು ತೆಗೆಯಬೇಡಿ ಎಂದು ಅನಿತಾ ಶೇಟ್‌ ಅವರು ಸಿಬ್ಬಂದಿಗೆ ತಿಳಿಸಿದಾಗ, ಪಕ್ಕದ ಮನೆಯ ವೆಂಕಟೇಶ ಕಾಮತ್‌ ಹಾಗೂ ರಾಮಚಂದ್ರ ಖಾರ್ವಿ ಅವರು ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಬಳಿಕ ಅನಿತಾ ಶೇಟ್‌ ಅವರನ್ನು ಕೈಯಿಂದ ಎಳೆದು ಕೆನ್ನೆ, ತಲೆ ಹಾಗೂ ಕಣ್ಣಿಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ

Ads on article

Advertise in articles 1

advertising articles 2

Advertise under the article