COSTALNEWS/ ಕರವೇ ಸಂಘಟನೆಗೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರ ಸೇರ್ಪಡೆ
Tuesday, August 25, 2026
ಕುಂದಾಪುರ: ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಸಂಘಟನೆಗೆ ಕುಂದಾಪುರ ಹಾಗೂ ಬೈಂದೂರು ತಾಲೂಕು ಅಧ್ಯಕ್ಷ ಶಿವ ಆರ್. ಪೂಜಾರಿ ಅವರ ನೇತೃತ್ವದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ.
ಇದರ ಭಾಗವಾಗಿ ಸೋಮವಾರ ಕುಂದಾಪುರ ಭಾಗದ ಫಿಟ್ನೆಸ್ ಜಿಮ್‌ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸೈನಿಕರಾಗಿ ಸೇರ್ಪಡೆಗೊಂಡರು ಸಂಘಟನೆಯ ತತ್ವ, ಸಿದ್ಧಾಂತ ಹಾಗೂ ಕನ್ನಡಪರ ಹೋರಾಟಗಳಿಗೆ ಬೆಂಬಲ ವ್ಯಕ್ತಪಡಿಸಿ ಯುವಕರು ಸೇರಿದಂತೆ ಹಲವು ಮಂದಿ ಸಂಘಟನೆಗೆ ಕೈಜೋಡಿಸಿರುವುದು ಗಮನ ಸೆಳೆಯಿತು.
ಹೊಸ ಕಾರ್ಯಕರ್ತರ ಸೇರ್ಪಡೆಯನ್ನು ಸ್ವಾಗತಿಸಿದ ಕರವೇ ಉಡುಪಿ ಜಿಲ್ಲಾಧ್ಯಕ್ಷ ಪ್ರಭಾಕರ್ ಆರಾ ಪೂಜಾರಿ ಅವರು, ಸಂಘಟನೆಗೆ ಸೇರ್ಪಡೆಗೊಂಡ ಸೈನಿಕರಿಗೆ ಅಭಿನಂದನೆ ಸಲ್ಲಿಸಿ, ಕನ್ನಡ ನಾಡು-ನುಡಿ ಹಾಗೂ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಪುರುಷೋತ್ತಮ್ ಪೂಜಾರಿ, ತಾಲೂಕು ಸಾಮಾಜಿಕ ಜಾಲತಾಣ ಸಂಚಾಲಕ ಸಚಿನ್ ಖಾರ್ವಿ, ಉಪಾಧ್ಯಕ್ಷ ಗುರುರಾಜ್ ಖಾರ್ವಿ ಸೇರಿದಂತೆ ಸಂಘಟನೆಯ ಹಲವು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕುಂದಾಪುರ ಹಾಗೂ ಬೈಂದೂರು ಭಾಗದಲ್ಲಿ ಕರವೇ ಸಂಘಟನೆಗೆ ನಿರಂತರವಾಗಿ ನಡೆಯುತ್ತಿರುವ ಕಾರ್ಯಕರ್ತರ ಸೇರ್ಪಡೆ ಸಂಘಟನೆಯ ಬಲವರ್ಧನೆಗೆ ಮತ್ತಷ್ಟು ಶಕ್ತಿ ನೀಡಿದೆ