ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS /ಬೈಂದೂರು: ಮರವಂತೆ ಶ್ರೀ ವರಾಹಸ್ವಾಮಿ ಕ್ಷೇತ್ರದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ: ಬೆಳಕಿಲ್ಲದೆ ಕತ್ತಲಲ್ಲಿ ಕಂಗಾಲಾದ ಭಕ್ತರು, ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ!

COSTALNEWS /ಬೈಂದೂರು: ಮರವಂತೆ ಶ್ರೀ ವರಾಹಸ್ವಾಮಿ ಕ್ಷೇತ್ರದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ: ಬೆಳಕಿಲ್ಲದೆ ಕತ್ತಲಲ್ಲಿ ಕಂಗಾಲಾದ ಭಕ್ತರು, ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ!


ಬೈಂದೂರು: ಕರಾವಳಿ ಭಾಗದ ಕಾರ್ಣಿಕ ಕ್ಷೇತ್ರದಲ್ಲಿ ಒಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮರವಂತೆಯ ಶ್ರೀ ವರಾಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ನಡೆಯುವ ಕರ್ಕಾಟಕ ಅಮಾವಾಸ್ಯೆ (ಭೀಮನ ಅಮಾವಾಸ್ಯೆ) ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಭಾರೀ ಅವ್ಯವಸ್ಥೆ ಎದ್ದು ಕಾಣುತ್ತಿದ್ದು, ಸಾರ್ವಜನಿಕರ ಹಾಗೂ ಭಕ್ತಾದಿಗಳ ಪಾಲಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಆಡಳಿತ ಮಂಡಳಿಯವರ ದುರಾಡಳಿತಕ್ಕೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ  
ಜಾತ್ರೆಯಲ್ಲಿ ಕಂಡುಬಂದ ಪ್ರಮುಖ ಅವ್ಯವಸ್ಥೆಗಳು 
 ಕಗ್ಗತ್ತಲೆಯಲ್ಲಿ ದೇವಾಲಯ: ವರ್ಷಕ್ಕೊಮ್ಮೆ ಜರುಗುವ ಪವಿತ್ರ ಜಾತ್ರಾ ಮಹೋತ್ಸವಕ್ಕೆ ದೇವಾಲಯಕ್ಕೆ ಹಾಗೂ ಸುತ್ತಮುತ್ತಲಿನ ಆವರಣಕ್ಕೆ ಸೂಕ್ತ ವಿದ್ಯುತ್ ದೀಪಾಲಂಕಾರ (Lighting) ಮಾಡದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ.
 ಕುಡಿಯುವ ನೀರು ಮತ್ತು ಶೌಚಾಲಯ ಬಂದ್‌: ದರ್ಶನಕ್ಕೆ ಬರುವ ಭಕ್ತರಿಗೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ ಎಂಬ ಆರೋಪ ..!
ಇದ್ದ ಶೌಚಾಲಯಗಳಿಗೂ ಬೀಗ ಹಾಕಿ ಬಂದ್‌ ಮಾಡಲಾಗಿದ್ದು, ಮಹಿಳೆಯರು, ವೃದ್ಧರು ಹಾಗೂ ಮಗು-ಮಕ್ಕಳು ತೀವ್ರ ಪರದಾಡುವಂತಾಯಿತು.
 ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ವಸೂಲಿ: ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಾಗದಲ್ಲಿ ವ್ಯಾಪಾರಸ್ಥರಿಗೆ ಜಾಗ ನೀಡಿ ಹಣ ವಸೂಲಿ ಮಾಡಿದ ಆಡಳಿತ ಮಂಡಳಿಯು, ಅಲ್ಲಿರುವ ಶೌಚಾಲಯಕ್ಕೂ ಬೀಗ ಜಡಿದಿದೆ. ದೂರದೂರುಗಳಿಂದ ಬಂದ ವ್ಯಾಪಾರಿಗಳು/ವರ್ತಕರು ಶೌಚಾಲಯವಿಲ್ಲದೆ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಶೋಕಿಗೇನೂ ಬರಗಾಲವಿಲ್ಲ ಎಂಬಂತೆ?? * 'ವಾಕಿ-ಟಾಕಿ' ಶೋ ಬಿಟ್ಟರೆ ಕೆಲಸವಿಲ್ಲ: ಕೈಯಲ್ಲಿ ವಾಕಿ-ಟಾಕಿ ಹಿಡಿದು ಶೋ ಮಾಡುವುದಷ್ಟೇ ಆಡಳಿತ ಮಂಡಳಿಯ ಕೆಲಸವಾಯಿತೇ ಹೊರತು, ಸಾರ್ವಜನಿಕರಿಗೆ ಯಾವುದೇ ಅನುಕೂಲ ಮಾಡಿಕೊಡಲಿಲ್ಲ ಎಂಬುದು ಭಕ್ತರ ನೇರ ಆರೋಪ.
 * ಅನುಭವದ ಕೊರತೆ ಹಾಗೂ ಸಂಪರ್ಕಕ್ಕೆ ಸಿಗದ ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್  ಹೆಬ್ಬಾರ್ : ಆಡಳಿತ ಮಂಡಳಿಗೆ ಜಾತ್ರೆ ನಡೆಸುವ ಕನಿಷ್ಠ ಅನುಭವವೂ ಇದ್ದಂತಿಲ್ಲ. ಸಾರ್ವಜನಿಕರು ಅಥವಾ ಭಕ್ತರು ಸಮಸ್ಯೆಗಳನ್ನು ಹೇಳಿಕೊಳ್ಳಲು ಹೋದರೆ ಭಕ್ತರ ಸಂಪರ್ಕಕ್ಕೇ ಸಿಗದೆ, ಯಾರ ಮಾತನ್ನೂ ಕೇಳದೆ ಜಾರಿಕೊಳ್ಳುವ ವರ್ತನೆ ತೋರಿದ್ದಾರೆ.
ಸಾರ್ವಜನಿಕರ ಆಗ್ರಹ:
ಕರ್ಕಾಟಕ ಅಮಾವಾಸ್ಯೆ ಜಾತ್ರೆಗೆ ಒಂದು ದಿನಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ
ಲಕ್ಷಾಂತರ ರೂಪಾಯಿ ಕಾಣಿಕೆ ಹಾಗೂ ವ್ಯಾಪಾರಿಗಳಿಂದ ಬಾಡಿಗೆ ವಸೂಲಿ ಮಾಡುವ ಆಡಳಿತ ಮಂಡಳಿಯ ಈ ಉಡಾಫೆ ಮತ್ತು ನಿರ್ಲಕ್ಷ್ಯದ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. 
ತಕ್ಷಣ ಉಡುಪಿ ಜಿಲ್ಲಾಧಿಕಾರಿಗಳು ಶಾಸಕರು, ಜನಪ್ರತಿನಿಧಿಗಳು ಧಾರ್ಮಿಕ ಮುಖಂಡರು ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ಅನುಭವವಿಲ್ಲದ ಈ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article