COSTALNEWS/ಮಣಿಪಾಲದ ಡೆಸ್ಟರ್ ಬಾರ್ & ರೆಸ್ಟೋರೆಂಟ್ ಮೇಲೆ ಪೊಲೀಸ್ ದಾಳಿ: ಪ್ರಕರಣ ದಾಖಲು
Sunday, August 2, 2026
ಉಡುಪಿ: ಮಣಿಪಾಲದಲ್ಲಿ ಅಪ್ರಾಪ್ತ ವಯಸ್ಕರಿಗೆ ಮದ್ಯ ಸೇವನೆಗೆ ಅವಕಾಶ ನೀಡಿದ ಆರೋಪದ ಮೇಲೆ ಬಾರ್ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಾಲಯದ ಅನುಮತಿ ಪಡೆದು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಿಎಲ್-7 ಬಾರ್‌ಗಳು ಹಾಗೂ ಪಬ್‌ಗಳಲ್ಲಿ ವಿಶೇಷ ದಾಳಿ ನಡೆಸಿದ ಪೊಲೀಸರು, ಟೈಗರ್ ಸರ್ಕಲ್ ಸಮೀಪದ Dexter Bar & Restaurant ನಲ್ಲಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಬಾರ್‌ನಲ್ಲಿ ಇದ್ದ 21 ಮಂದಿ ಯುವಕ-ಯುವತಿಯರು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವುದು ಪತ್ತೆಯಾಯಿತು.
ಅಲ್ಲದೆ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರವೇಶ ನಿಷೇಧಿಸಿರುವ ಬಗ್ಗೆ ಕಡ್ಡಾಯವಾಗಿ ಇರಬೇಕಾದ ಸೂಚನಾ ಫಲಕವೂ ಬಾರ್‌ನಲ್ಲಿ ಇಲ್ಲ ಎಂದು ಪರಿಶೀಲನೆ ವೇಳೆ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಬಾರ್ ಮಾಲೀಕರ ವಿರುದ್ಧ ಕರ್ನಾಟಕ ಅಬಕಾರಿ ಅಧಿನಿಯಮ-1967ರ ಕಲಂ 36(1)(b) ಅಡಿಯಲ್ಲಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 117/2026ರಂತೆ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀಶೈಲ ಡಿ.ಎಂ. ಅವರು ಸಿಬ್ಬಂದಿಯೊಂದಿಗೆ ನಡೆಸಿದ್ದಾರೆ. ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.