ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS/ ಕಾನಿಪಾ 4ನೇ ರಾಜ್ಯ ಸಮ್ಮೇಳನ - ಕಾರ್ಯಕ್ರಮದ ಉದ್ಘಾಟಕರಾಗಿ ಡಾ. ಗೋವಿಂದ ಬಾಬು ಪೂಜಾರಿ

COSTALNEWS/ ಕಾನಿಪಾ 4ನೇ ರಾಜ್ಯ ಸಮ್ಮೇಳನ - ಕಾರ್ಯಕ್ರಮದ ಉದ್ಘಾಟಕರಾಗಿ ಡಾ. ಗೋವಿಂದ ಬಾಬು ಪೂಜಾರಿ


ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ( ರಿ) (ಸಂಘಟನೆ) ಆಯೋಜಿಸುತ್ತಿರುವ 4 ನೇ ರಾಜ್ಯ ಸಮ್ಮೇಳನಕ್ಕೆ ದಿನಗಣನೆ ಶುರುವಾಗಿದೆ. ಮುಂಬರುವ ಆಗಸ್ಟ್ 8 ರಂದು ನೆಲಮಂಗಲದಲ್ಲಿ ನಡೆಯಲಿರುವ ಈ ಬೃಹತ್ ಸಮ್ಮೇಳನವನ್ನು ಕರಾವಳಿ ಭಾಗದ ಹೆಸರಾಂತ ಉದ್ಯಮಿ, ಸಮಾಜ ಸೇವಕ ಆಶ್ರಯ ದಾತ ಹಾಗೂ 'ಆಪತ್ಬಾಂಧವ' ಎಂದೇ ಹೆಸರುವಾಸಿಯಾದ ಡಾ. ಗೋವಿಂದ ಬಾಬು ಪೂಜಾರಿ ಅವರು ಉದ್ಘಾಟಿಸಲಿದ್ದಾರೆ.
ಆಗಸ್ಟ್ 8 ರಂದು ಬೆಂಗಳೂರಿನ ನೆಲಮಂಗಲದಲ್ಲಿ 'ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ' (ರಿ.) ಸಂಘಟನೆಯ 4 ನೇ ರಾಜ್ಯ ಸಮ್ಮೇಳನ ಬಹಳ ವಿಜೃಂಭಣೆಯಿಂದ ನಡೆಯಲಿದೆ. 
ಈ ಸಮ್ಮೇಳನಕ್ಕೆ ಕರಾವಳಿ ಭಾಗದ ಆಶ್ರಯದಾತ, ಗುಣರತ್ನ, ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಅವರು ಮುಖ್ಯ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಬುದ್ಧಿವಂತರ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ಕರಾವಳಿ ಭಾಗದ ಪ್ರಮುಖರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಅವರಿಂದ ಸಮ್ಮೇಳನವನ್ನು ಉದ್ಘಾಟಿಸಬೇಕು ಎಂಬುದು ತಮ್ಮ ಬಹಳ ದಿನದ ಕನಸಾಗಿತ್ತು ಎಂದು ರಾಜ್ಯಾಧ್ಯಕ್ಷರು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಹೌದು
"ಬುದ್ಧಿವಂತರ ನಾಡಿನ ಗುಣರತ್ನ, ಆಶ್ರಯ ದಾತ ಆಪತ್ಬಾಂಧವ ಡಾ. ಗೋವಿಂದ ಬಾಬು ಪೂಜಾರಿ ಅವರ ಉಪಸ್ಥಿತಿಯಲ್ಲಿ ನಮ್ಮ 4 ನೇ ರಾಜ್ಯ ಸಮ್ಮೇಳನ ಉದ್ಘಾಟನೆಗೊಳ್ಳುತ್ತಿರುವುದು ನಮಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ."
ಒಟ್ಟಾರೆಯಾಗಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಹಾಗೂ ಮಾಧ್ಯಮ ರಂಗದ ಏಳಿಗೆಗಾಗಿ ನಡೆಯುತ್ತಿರುವ ಈ ಸಮ್ಮೇಳನಕ್ಕೆ ನೆಲಮಂಗಲದಲ್ಲಿ ಸರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಕರಾವಳಿ ಕಿರೀಟ ಡಾ. ಗೋವಿಂದ ಬಾಬು ಪೂಜಾರಿ ಅವರ ಆಗಮನ ಸಮ್ಮೇಳನಕ್ಕೆ ಮತ್ತಷ್ಟು ಶೋಭೆ ತರಲಿದೆ.
ವರದಿ: ದಾಮೋದರ ಮೊಗವೀರ ಕುಂದಾಪುರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ರಿ ಉಡುಪಿ ಜಿಲ್ಲಾಧ್ಯಕ್ಷರು

Ads on article

Advertise in articles 1

advertising articles 2

Advertise under the article