COSTALNEWS/ಹೆಮ್ಮಾಡಿ: ಮೊಗವೀರ ಯುವ ಸಂಘಟನೆ ವತಿಯಿಂದ :ಸ್ವಯಂ ಪ್ರೇರಿತ ರಕ್ತದಾನ ಶಿಬಿರ - 102 ಯೂನಿಟ್ ರಕ್ತ ಸಂಗ್ರಹ .
Monday, August 10, 2026
ಕುಂದಾಪುರ: ಹೆಮ್ಮಾಡಿ(ಆ. 09 ರಂದು ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳು, ಹೆಮ್ಮಾಡಿ ,
ವೆಲಾಸಿಟಿ ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ & ಫಿಟ್ನೆಸ್ ಹೆಮ್ಮಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ ಟ್ರಸ್ಟ್ (ರಿ.) ಕುಂದಾಪುರ ತಾಲೂಕು,ಮೊಗವೀರ ಸ್ತ್ರೀ ಶಕ್ತಿ, ಬಗ್ವಾಡಿ ಹೋಬಳಿ ಹಾಗೂ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ(ನಿ.) ಇದರ ಮತ್ಯ್ಶ ಜ್ಯೋತಿ ಸಭಾಂಗಣದಲ್ಲಿ ನಡೆಯಿತು.
ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಜಿಲ್ಲಾಧ್ಯಕ್ಷರಾದ ಶ್ರೀ ರವೀಶ ಕೊರವಡಿ ಯವರು ಶಿಬಿರವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿ ನೆಲೆಯಲ್ಲಿ ಮೊಗವೀರ ಮಹಾಜನ ಸೇವಾ ಸಂಘ (ರಿ), ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಇದರ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ , ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ(ನಿ.) ಹೆಮ್ಮಾಡಿ ಇದರ ಅಧ್ಯಕ್ಷ ರಾಜು ಶ್ರೀಯಾನ್ ಗುಜ್ಜಾಡಿ, ಮೊಗವೀರ ಯುವ ಸಂಘಟನೆ ರಿ, ಉಡುಪಿ ಜಿಲ್ಲೆ. ಇದರ ನಿಕಟಪೂರ್ವ ಅಧ್ಯಕ್ಷ ಶ್ರೀ ಜಯಂತ್ ಅಮೀನ್ ಕೋಡಿ, ಜಿಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶ್ರೀ ಶೇಖರ್ ತೋಳಾರ್ ಮರಾತುರ್ ,ಹೆಮ್ಮಾಡಿ ಘಟಕದ ಗೌರವಾಧ್ಯಕ್ಷರಾದ ಶ್ರೀ ದಿನೇಶ್ ಕಾಂಚನ್ ಬಾಳಿಕೆರೆ,
ಘಟಕದ ಉಸ್ತುವಾರಿಗಳಾದ ಶ್ರೀ ಪಾಂಡುರಂಗ ಬೈಂದೂರ್,
ವೆಲಾಸಿಟಿ ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ & ಫಿಟ್ನೆಸ್ ಹೆಮ್ಮಾಡಿ ಇದರ ಉಪಾಧ್ಯಕ್ಷರಾದ ಶ್ರೀ ನಾಗರಾಜ್ ಪುತ್ರನ್ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ ಟ್ರಸ್ಟ್ (ರಿ.) ಕುಂದಾಪುರ ತಾಲೂಕು ಇದರ ವಂಡ್ಸೆ ವಲಯದ ಅಧ್ಯಕ್ಷರಾದ ಶ್ರೀ ಶಶಿಧರ್ ಶೆಟ್ಟಿ, ರೆಡ್ ಕ್ರಾಸ್ ಸೊಸೈಟಿ, ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ,ಮೊಗವೀರ ಸ್ತ್ರೀ ಶಕ್ತಿ ಬಗ್ವಾಡಿ ಹೋಬಳಿಯ ಅಧ್ಯಕ್ಷರಾದ ಶ್ರೀಮತಿ ಬೇಬಿ ಜಿ. ನಾಯ್ಕ್, ಘಟಕದ ಕಾರ್ಯದರ್ಶಿ ಶ್ರೀ ಜಯಂತ್ ಕುಂದರ್ ಬಾಳಿಕೆರೆ, ವೆಲಾಸಿಟಿ ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ & ಫಿಟ್ನೆಸ್ ಹೆಮ್ಮಾಡಿ ಇದರ ಮುಖ್ಯ ತರಬೇತಿದಾರರಾದ ಅಕ್ಷಯ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 102 ಯೂನಿಟ್ ರಕ್ತ ಸಂಗ್ರಹಿಸಲಾಯಿತು
ಜನತಾ ಸಮೂಹ ಶಿಕ್ಷಣ ಸಂಸ್ಥೆಗಳು ಹೆಮ್ಮಾಡಿ, ಸುಳ್ಸೆ, ಕಿರಿಮಂಜೇಶ್ವರ ಇದರ ಅಧ್ಯಕ್ಷರಾದ ಶ್ರೀ ಗಣೇಶ್ ಮೊಗವೀರ ರಕ್ತದಾನಿಗಳಿಗೆ ಬ್ಯಾಗ್ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.
ಘಟಕದ ಮಾಜಿ ಅಧ್ಯಕ್ಷರಾದ್ ಶ್ರೀ ಮಂಜುನಾಥ್ ನೆಂಪು ಸ್ವಾಗತಿಸಿದರು, ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಶ್ಯಾಮಲಾ ಜಿ. ಚಂದನ್ ಪ್ರಾರ್ಥಿಸಿದರು.
ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ಲೋಹಿತಾಶ್ವ ಆರ್. ಕುಂದರ್ ವಂದಿಸಿ ನಿರೂಪಿಸಿದರು.