COSTALNEWS/ ಗಂಗೊಳ್ಳಿ:ಕೋಳಿ ಅಂಕ ಅಡ್ಡೆಗೆ ಖಾಕಿ ದಾಳಿ : ಇಬ್ಬರು ಅರೆಸ್ಟ್…!!
Sunday, August 9, 2026
ಗಂಗೊಳ್ಳಿ : ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಡಾ ಗ್ರಾಮದ ಕೋಣ್ಕಿಯ ನಂದ್ರೋಳಿ ಸಾರ್ವಜನಿಕ ಹಾಡಿಯಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಜುಗಾರಿ ಆಟದ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆ ಠಾಣಾಧಿಕಾರಿ ಪವನ್ ನಯಕ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುಧಾಕರ (61) ಹಾಗೂ ಸುರೇಶ್ (40) ಎಂದು ಗುರುತಿಸಲಾಗಿದೆ.
ದಾಳಿ ವೇಳೆ ಉಳಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸರು ಸ್ಥಳದಿಂದ 10 ಕೋಳಿ ಹುಂಜಗಳು, 4 ಕೋಳಿಬಾಳು (ಕತ್ತಿಗಳು), 5 ಹಗ್ಗಗಳು, ₹2,350 ನಗದು ಹಾಗೂ 8 ಮೋಟಾರ್‌ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೋಳಿಗಳಿಗೆ ಹಿಂಸೆ ನೀಡಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಜುಗಾರಿ ನಡೆಸಿದ ಆರೋಪದಡಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 37/2026 ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಪವನ್ ನಾಯಕ್ ಮತ್ತು ಸಿಬ್ಬಂದಿಗಳು ಉಳಿದ ಆರೋಪಿಗಳಿಗೆ ಶೋದ ಕಾರ್ಯ ಮುಂದುವರಿದಿದೆ