ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

udupi ಅಜ್ಜರಕಾಡು ಬ್ಲಡ್ ಬ್ಯಾಂಕ್ ನಲ್ಲಿ ರಾತ್ರಿ ರಕ್ತ ಮಾರಾಟ ದಂಧೆ : ಫೋಟೋ ವೈರಲ್…!! ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ- ದೂರು ದಾಖಲು

udupi ಅಜ್ಜರಕಾಡು ಬ್ಲಡ್ ಬ್ಯಾಂಕ್ ನಲ್ಲಿ ರಾತ್ರಿ ರಕ್ತ ಮಾರಾಟ ದಂಧೆ : ಫೋಟೋ ವೈರಲ್…!! ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ- ದೂರು ದಾಖಲು


ಉಡುಪಿ: ಜಿಲ್ಲಾ ಆಸ್ಪತ್ರೆ ಉಡುಪಿ ರಕ್ತ ನಿಧಿ ಕೇಂದ್ರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಸುಳ್ಳು ಸುದ್ದಿಗಳು ಆಧಾರರಹಿತವಾಗಿದ್ದು ಇದರ ಬಗ್ಗೆ ಸರಿಯಾದ ಸ್ಪಷ್ಟಿಕರಣ ನೀಡುವ ಕುರಿತು.

ದಿನಾಂಕ 07-07-2026 ರಂದು ಜಿಲ್ಲಾ ಆಸ್ಪತ್ರೆ ಉಡುಪಿ ರಕ್ತ ನಿಧಿ ಕೇಂದ್ರದ ಕುರಿತು ರಕ್ತವನ್ನು ಯಾವುದೆ ದಾಖಲಾತಿ ಅಥವಾ ರಶೀದಿ ಇಲ್ಲದೆ ವಿತರಿಸಲಾಗುತ್ತಿದೆ.ಒಂದೇ ಬಾರಿ 15ಯುನೀಟ್ ರಕ್ತವನ್ನ ಖಾಸಗಿ ಆಸ್ಪತ್ರಗೆ ನೀಡಲಾಗಿದೆ ಆದರೆ ಈ ಮೆಲ್ಕಂಡ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಸುಳ್ಳು ಆರೋಪವಾಗಿರುತ್ತದೆ.

ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರದಿಂದ ರಕ್ತ ಹಾಗೂ ರಕ್ತ ಘಟಕಗಳ ವಿತರಣೆಯನ್ನು ಕರ್ನಾಟಕ ಸರ್ಕಾರದ ಜಾರಿಯಲ್ಲಿರುವ ಮಾರ್ಗಸೂಚಿಗಳು.Drugs cosmetics act 1940 and ಸಂಬಂಧಿತ ನಿಯಮಗಳು ಹಾಗೂ ರಕ್ತ ಕೇಂದ್ರದ (Standard operating procedures) ಅನುಸಾರ ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತದೆ. ಪ್ರತಿ ಯೂನಿಟ್ ರಕ್ತ ಅಥವಾ ರಕ್ತ. ಘಟಕವನ್ನು ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿ. ನಿಗದಿತ ನೋಂದಣಿಗಳನ್ನು ಪೂರ್ಣಗೊಳಿಸಿದ ನಂತರವೇ ವಿತರಿಸಲಾಗುತ್ತದೆ. ಯಾವುದೇ ರಕ್ತ ಅಥವಾ ರಕ್ತ ಘಟಕವನ್ನು ದಾಖಲಾತಿಗಳಿಲ್ಲದೆ ವಿತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಮತ್ತು ಅದರ ಪ್ರಕಾರವೇ ಬ್ಲಡ್ ಸೋಟರಜ್ ಯುನಿಟ್ ನಿರ್ವಹಿಸುತ್ತಿರುವ ಅದರ್ಶ ಆಸ್ಪತ್ರೆಗೆ ಸರಕಾರದ ಮಾರ್ಗಸೂಚಿ ಗಳ ಅನ್ವಯ ಬ್ಲಡ್ ನ್ನು ವಿತರಿಸುಲಾಗಿರುತ್ತದೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳಾಗಿದ್ದು ಈ ಸಂಬಂದ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರ ಬಗೆ ತನಿಖೆ ಮಾಡಲು ಕೊರಿದೆ ಹಾಗೂ ಇದರ ತಪ್ಪಿಸ್ಥರಿಗೆ ಕಠಿನ ಕ್ರಮಗಳನ್ನು ತೆಗೆದುಕೊಳ್ಳಲು ಕೋರಿದೆ. 

Ads on article

Advertise in articles 1

advertising articles 2

Advertise under the article