ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS | ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವ್ರತಾಚರಣೆ: ಗುಜ್ಜಾಡಿಯಲ್ಲಿ ಪೂರ್ವಭಾವಿ ಸಭೆ

COSTALNEWS | ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವ್ರತಾಚರಣೆ: ಗುಜ್ಜಾಡಿಯಲ್ಲಿ ಪೂರ್ವಭಾವಿ ಸಭೆ

ಕುಂದಾಪುರ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವ್ರತಾಚರಣೆಯ ಹಿನ್ನೆಲೆ ಗುಜ್ಜಾಡಿಯ ಬ್ರಹ್ಮಶ್ರೀ ಶ್ರೀ ರಾಮ್ ಭಗವಾನ್ ನಾರಾಯಣ ಗುರು ಮಂದಿರದಲ್ಲಿ ಗಣೇಶ್ ಪೂಜಾರಿ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಚಾತುರ್ಮಾಸ ವ್ರತಾಚರಣೆಯನ್ನು ಭಕ್ತಿಭಾವದಿಂದ ಹಾಗೂ ಶಿಸ್ತುಬದ್ಧವಾಗಿ ಯಶಸ್ವಿಗೊಳಿಸಲು ಕೈಗೊಳ್ಳಬೇಕಾದ ವಿವಿಧ ಕಾರ್ಯಕ್ರಮಗಳು, ಭಕ್ತರಿಗೆ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಹಾಗೂ ಸಂಘಟನಾ ವಿಚಾರಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಜಗದೀಶ್ ಪೂಜಾರಿ, ರಾಮ್ ಪೂಜಾರಿ, ಹರೀಶ್ ಮೇಸ್ತ, ತಮ್ಮಯ್ಯ ದೇವಾಡಿಗ, ರಾಜು ಪೂಜಾರಿ, ರಾಜು ಪೂಜಾರಿ (ಗುಜ್ಜಾಡಿ), ಗುಂಡ ಮೇಲ್ಂಡಿ, ರಾಮನಾಥ್ ಚಿತ್ತಲ್, ಶ್ರೀಕಾಂತ್ ಮೊಗವೀರ, ರಘುರಾಮ್ ಕೊಡಪಾಡಿ , ಕಿಶೋರ್ ಮಂಕಿ, ರಾಘವೇಂದ್ರ ಪೂಜಾರಿ ಗುಜ್ಜಾಡಿ, ಶೇಖರ್ ಪೂಜಾರಿ, ಸೇರಿದಂತೆ ಮಹಿಳೆಯರು ಹಾಗೂ ಅನೇಕ ಗಣ್ಯರು ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.
ಚಾತುರ್ಮಾಸ ವ್ರತಾಚರಣೆಯ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

Ads on article

Advertise in articles 1

advertising articles 2

Advertise under the article