ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS  ಕುಂದಾಪುರ: ರಾಷ್ಟ್ರೀಯ ಮಟ್ಟದ ಸಾಧಕ ಡಾ. ಸತೀಶ್ ಖಾರ್ವಿಗೆ ವಕೀಲ ರವಿಕಿರಣ ಮುಡೇಶ್ವರರಿಂದ ಅಭಿನಂದನೆ

COSTALNEWS ಕುಂದಾಪುರ: ರಾಷ್ಟ್ರೀಯ ಮಟ್ಟದ ಸಾಧಕ ಡಾ. ಸತೀಶ್ ಖಾರ್ವಿಗೆ ವಕೀಲ ರವಿಕಿರಣ ಮುಡೇಶ್ವರರಿಂದ ಅಭಿನಂದನೆ

ಕುಂದಾಪುರ: ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಕುಂದಾಪುರದ ನ್ಯೂ ಹರ್ಕ್ಯುಲಸ್ ಜಿಮ್‌ನ ವ್ಯವಸ್ಥಾಪಕರಾದ ಡಾ. ಸತೀಶ್ ಖಾರ್ವಿ ಅವರು ರಾಷ್ಟ್ರೀಯ ಮಾಸ್ಟರ್ಸ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 4 ಚಿನ್ನ, 3 ಬೆಳ್ಳಿ ಹಾಗೂ 1 ಕಂಚಿನ ಪದಕಗಳನ್ನು ಗೆದ್ದು, 6 ರಾಷ್ಟ್ರೀಯ ಡೆಡ್ಲಿಫ್ಟ್ ದಾಖಲೆಗಳನ್ನು ನಿರ್ಮಿಸಿ ಅಪೂರ್ವ ಸಾಧನೆ ಮಾಡಿದ್ದಾರೆ.
ಈ ಮಹತ್ವದ ಸಾಧನೆಯನ್ನು ಗುರುತಿಸಿ, ಕುಂದಾಪುರದ ಖ್ಯಾತ ಹಿರಿಯ ವಕೀಲರಾದ ರವಿಕಿರಣ ಮುಡೇಶ್ವರ ಅವರು ತಮ್ಮ ಕಚೇರಿಯಲ್ಲಿ ಡಾ. ಸತೀಶ್ ಖಾರ್ವಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಕ್ರೀಡಾ ಕ್ಷೇತ್ರದಲ್ಲಿ ಅವರು ಸಾಧಿಸಿರುವ ಯಶಸ್ಸು ಕುಂದಾಪುರಕ್ಕೆ ಹೆಮ್ಮೆಯ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಪವರ್‌ಲಿಫ್ಟರ್ ಕಾರ್ತಿಕ್ ಪೂಜಾರಿ ಅವರು ಉಪಸ್ಥಿತರಿದ್ದು, ಡಾ. ಸತೀಶ್ ಖಾರ್ವಿ ಅವರ ಸಾಧನೆಯನ್ನು ಶ್ಲಾಘಿಸಿದರು.

Ads on article

Advertise in articles 1

advertising articles 2

Advertise under the article