BREAKING NEWS : ಚಿಕ್ಕಮಗಳೂರು ಅಧಿಕಾರಿಗಳ ನಿರ್ಲಕ್ಷಿಗೆ ಬೇಸತ್ತು ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾದ ಕಡಿದಾಳು ಗ್ರಾಮದ ರಘುಪತಿ ದಂಪತಿ
Sunday, June 7, 2026
ರಘುಪತಿ ದಂಪತಿ ಶ್ರಮದಾನ ನೋಡಿ ಸಾರ್ವಜನಿಕ ವಲಯದಲ್ಲಿ ಬಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ
ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿದಾಳು ಗ್ರಾಮದ ಪ್ರಮುಖ ರಸ್ತೆಯು ಹಲವು ವರ್ಷಗಳಿಂದ ಗುಂಡಿಗಳಿಂದ ತುಂಬಿದ್ದು ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತು ಸ್ವಂತ ಖರ್ಚಿನಲ್ಲಿ ಗುಂಡಿ ಮುಚ್ಚಲು ದಂಪತಿ ಮುಂದಾದ ಘಟನೆ ನಡೆದಿದೆ.
ಹೌದು ಸುಮಾರು ವರ್ಷಗಳಿಂದ ರಸ್ತೆಯು ಹಾಳಾಗಿದ್ದು ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತ ಸುಧಾ ರಘುಪತಿ ಪುರೋಹಿತ್ ದಂಪತಿ ತಾವೇ ದುರಸ್ತಿ ಮಾಡಿಸಿದ್ದಾರೆ.
ಹಲವಾರು ತಿಂಗಳುಗಳಿಂದ ರಸ್ತೆ ಮೇಲೆಯೇ ಗುಂಡಿ ನಿರ್ಮಾಣವಾಗಿ, ಅದರಲ್ಲಿ ನೀರು ಸಂಗ್ರಹಗೊಂಡು ಕೊಳಚೆ ಗುಂಡಿಯಾಗಿ ನಿರ್ಮಾಣವಾಗಿತ್ತು. ಅದರ ದುರಸ್ತಿಗೆ ಗ್ರಾಮಸ್ಥರು ಸಾಕಷ್ಟು ಬಾರಿ ರಸ್ತೆ ದುರಸ್ತಿಗೆ ವಿನಂತಿಸಿಕೊಂಡರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರು.
ಅಧಿಕಾರಿಗಳ ನಿರ್ಲಕ್ಷ ಗಮನಿಸಿದ ರಘುಪತಿ ಸುಧಾ ದಂಪತಿ ಸುಮಾರು 1.5 ಲಕ್ಷ ಹಣ ಖರ್ಚು ಮಾಡಿ ರಸ್ತೆಯಲ್ಲಿನ ಗುಂಡಿಗಳನ್ನು ತಮ್ಮ ಶ್ರಮದಿಂದ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದು ಗ್ರಾಮದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ವಾಹನಗಳು ನಿರಂತರ ಚಲಿಸುವ ರಸ್ತೆ ಇದಾಗಿದ್ದರೂ, ರಸ್ತೆ ಮೇಲೆ ಗುಂಡಿ ನಿರ್ಮಾಣವಾಗಿ ಸಾಕಷ್ಟು ವರ್ಷಗಳೇ ಕಳೆದಿದ್ದವು. ದುರಸ್ತಿಗೆ ಗ್ರಾಮ ಪಂಚಾಯ್ತಿ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ.
ಅಧಿಕಾರಿಗಳ ಗಮನಕ್ಕೆ ತಂದರೂ ಅವರೂ ಕ್ಯಾರೇ ಅನ್ನಲಿಲ್ಲ. ಗುಂಡಿಯಲ್ಲಿ ನಿಂತ ನೀರು ಮಲಿನವಾಗಿ ಕ್ರಿಮಿಕೀಟಗಳು ಹೆಚ್ಚಾಗಿ ರೋಗ ಹರಡುವ ಸ್ಥಳವಾಯಿತು. ನಾಯಿಗಳು ಧನಗಳು ಅದೇ ಕೊಳಚೆ ನೀರಿನಲ್ಲಿ ಬಿದ್ದು ಹೊರಳಾಡುವ, ಗೊಬ್ಬು ವಾಸನೆ ಸ್ಥಳವಾಗಿಯೂ ಕಂಡು ಬಂದಿತು.
ಈಗಾಗಲೇ ಅರ್ಧ ರಸ್ತೆ ಅಭಿವೃದ್ಧಿಗೊಂಡಿದ್ದು, ಮುಂದಿನ ಭಾಗದ ರಸ್ತೆ ಅಭಿವೃದ್ಧಿ ಕುಂಠಿತಗೊಂಡಿತ್ತು. ಈ ಕುರಿತು ಅನೇಕ ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಹಾಳಾದ ಈ ರಸ್ತೆ ತುಂಬಾ ಗುಂಡಿಗಳಿಂದ ಕೂಡಿದ್ದು, ಮಳೆ ಬಂದಾಗ ರಸ್ತೆಯೇ ಕಾಣದೆ ಕೆಸರು ಗದ್ದೆಯಂತಾಗುತ್ತಿತ್ತು. ಇಂಥ ರಸ್ತೆಯಲ್ಲಿ ಬೈಕ್ ಸವಾರರು ಆಯ ತಪ್ಪಿ ಬಿದ್ದು, ಗಾಯಗೊಂಡಿದ್ದಾರೆ. ಕೆಲ ವಾಹನ ಚಾಲಕರು ಈ ರಸ್ತೆ ಮೂಲಕ ಸಾಗಲು ಹರಸಾಹಸಪಡುವುದು ಸಾಮಾನ್ಯ. ಇನ್ನು ಕೆಲ ವಾಹನಗಳು ರಸ್ತೆಯಲ್ಲಿಯೇ ಸಿಲುಕಿ ತೊಂದರೆ ಅನುಭವಿಸುವುದು ನಿತ್ಯ ಗೋಳಾಟವಾಗಿತ್ತು
ಅದ್ದರಿಂದ ಬೇಸತ್ತು ಜೆಸಿಬಿ ಯಂತ್ರದಿಂದ ಜಲ್ಲಿ,ಮಣ್ಣು, ಎಂಸ್ಯಾನ್ಡ ಬಳಸಿ ಸದ್ಯ ತಾತ್ಕಾಲಿಕವಾಗಿ ರಸ್ತೆ ದುರಸ್ತಿಯನ್ನು ಸ್ವಂತ ಖರ್ಚಿನಲ್ಲಿ ಮಾಡಿಕೊಂಡಿದ್ದು
ಪಿಡಬ್ಲ್ಯುಡಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಶಾಶ್ವತ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಂಡಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗಲಿದೆ
ನಮ್ಮ ಕಾರು ಗುಂಡಿಗಳಿಂದ ಜಖಂಗೊಂಡಿದ್ದು ಅಲ್ಲದೆ ದ್ವಿ ಚಕ್ರ ಸವಾರರು ಬಿದ್ದು ಗಾಯಗೊಂಡಿದ್ದನ್ನು ನೋಡಿ ಬೇಸರವಾಯಿತು ಇದನ್ನು ಗಮನಿಸಿ ಸ್ವಂತ ಹಣದಿಂದ ದುರಸ್ತಿ ಮಾಡಿದ್ದಾಗಿ ಸುಧಾ ರಘುಪತಿ ತಿಳಿಸಿದರು.ಈ ಕಾರ್ಯ ಗ್ರಾಮಸ್ಥರಲ್ಲಿ ಹಾಗೂ
ಸಾರ್ವಜನಿಕ ವಲಯದಲ್ಲಿ ಹೆಚ್ಚು ಗಮನ ಹರಿಸಿದೆ.
ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ದಂಪತಿಗಳು ಮಾಡಿ ಮುಗಿಸಿದ್ದಾರೆ. ಸಣ್ಣ ಪುಟ್ಟ ಸಾರ್ವಜನಿಕ ಕೆಲಸಗಳನ್ನ ಮಾಡದ ಆಡಳಿತ ಇನ್ನು ದೊಡ್ಡ ದೊಡ್ಡ ದುರಸ್ತಿ ಕಾರ್ಯಗಳನ್ನು ಹೇಗೆ ಮಾಡುತ್ತದೆ. ಅಧಿಕಾರಿಗಳು ಸತ್ತಿದ್ದಾರ?? ಎಂಬ ಪ್ರಶ್ನೆ ಮೂಡಿದೆ.
ವರದಿ: ಸತೀಶ್ ಕಂಚುಗೋಡು COSTALNEWS ಕುಂದಾಪುರ