ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

udupi: ಉಡುಪಿ ಜಿಲ್ಲೆಯಲ್ಲಿ ಇಂದು 650ಕ್ಕೂ ಅಧಿಕ ಮೆಡಿಕಲ್ ಗಳು ಬಂದ್

udupi: ಉಡುಪಿ ಜಿಲ್ಲೆಯಲ್ಲಿ ಇಂದು 650ಕ್ಕೂ ಅಧಿಕ ಮೆಡಿಕಲ್ ಗಳು ಬಂದ್

ಉಡುಪಿ: ಆನ್‌ಲೈನ್ ಮೂಲಕ ನಡೆಯುತ್ತಿರುವ ಔಷಧ ಮಾರಾಟ ಸೇವೆಗೆ ವಿರೋಧ ವ್ಯಕ್ತಪಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಉಡುಪಿ ಜಿಲ್ಲೆಯಾದ್ಯಂತ ಇಂದು ಮೆಡಿಕಲ್ ಬಂದ್ ನಡೆಸಲಾಗಿದೆ. ಜಿಲ್ಲೆಯ 650ಕ್ಕೂ ಅಧಿಕ ಮೆಡಿಕಲ್ ಅಂಗಡಿಗಳು ಬಂದ್‌ನಲ್ಲಿ ಭಾಗವಹಿಸಿವೆ.
ಬಂದ್ ನಡೆಸಿದ ಅಸೋಸಿಯೇಷನ್ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಅಸೋಸಿಯೇಷನ್ ಪದಾಧಿಕಾರಿಗಳು ಮಾತನಾಡಿ, ಆನ್‌ಲೈನ್ ಸೇವೆಯಿಂದ ಕಾನೂನು ಬಾಹಿರ ಔಷಧ ವ್ಯವಹಾರಗಳಿಗೆ ಅವಕಾಶ ಸಿಗುತ್ತಿದೆ ಎಂದು ಆರೋಪಿಸಿದರು. ವೈದ್ಯರ ಚೀಟಿ ಇಲ್ಲದೆ ಔಷಧಿಗಳನ್ನು ನೀಡಲಾಗುತ್ತಿದ್ದು, ಎಐ ಹಾಗೂ ಪಿಡಿಎಫ್ ಎಡಿಟರ್ ಬಳಸಿ ನಕಲಿ ಪ್ರಿಸ್ಕ್ರಿಪ್ಷನ್ ಸಿದ್ಧಪಡಿಸಿ ಔಷಧ ಪಡೆಯಲಾಗುತ್ತಿದೆ.
ವಿಶೇಷವಾಗಿ ಯುವಕರು ನಕಲಿ ಸಹಿಗಳಿರುವ ಪ್ರಿಸ್ಕ್ರಿಪ್ಷನ್‌ಗಳನ್ನು ಸ್ಕ್ಯಾನ್ ಮಾಡಿ ನಿದ್ರೆ ಮಾತ್ರೆಗಳು ಹಾಗೂ ನರ್ಕೋಟಿಕ್ ಔಷಧಿಗಳನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳುತ್ತಿರುವುದು ಅಪಾಯಕಾರಿಯಾಗಿದೆ. ಇದರಿಂದ ಯುವಕರು ಮಾದಕ ವ್ಯಸನಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತಿದೆ ಎಂದು ಹೇಳಿದರು.
ಕೋವಿಡ್ ಅವಧಿಯಲ್ಲಿ ಆನ್‌ಲೈನ್ ಸೇವೆ ಅಗತ್ಯವಾಗಿತ್ತು. ಆಗ ಜನರಿಗೆ ಅನುಕೂಲವೂ ಆಗಿತ್ತು. ಆದರೆ ಈಗ ಅದರ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟ ಅವರು, “ವೈದ್ಯರಿಗೂ ಕೆಲಸ ಇಲ್ಲ, ನಮಗೂ ಕೆಲಸ ಇಲ್ಲದ ಪರಿಸ್ಥಿತಿ ಬಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಔಷಧ ಕಂಪನಿಗಳು ಮೆಡಿಕಲ್ ಅಂಗಡಿಗಳಿಗೆ ಸುಮಾರು 40 ಶೇಕಡಾ ಮಾರ್ಜಿನ್ ನೀಡುತ್ತಿದ್ದರೆ, ಆನ್‌ಲೈನ್ ಕಂಪನಿಗಳು 50 ಶೇಕಡಾ ಡಿಸ್ಕೌಂಟ್ ನೀಡುತ್ತಿರುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನೂ ಎತ್ತಿದರು.
“ನಮ್ಮ ಬಳಿ ಬರುವ ಪ್ರತಿಯೊಂದು ಔಷಧಿಗೂ ಬ್ಯಾಚ್ ನಂಬರ್ ಸೇರಿದಂತೆ ಸಂಪೂರ್ಣ ದಾಖಲೆ ಇರುತ್ತದೆ. ಫಾರಂ-5 ನಿಯಮಾನುಸಾರ ಕಾರ್ಯನಿರ್ವಹಿಸುತ್ತೇವೆ. ಸರ್ಕಾರ ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡುತ್ತೇವೆ. ಆದರೆ ಆನ್‌ಲೈನ್ ವ್ಯವಹಾರದಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ” ಎಂದು ಹೇಳಿದರು.
“ಕೇವಲ ವ್ಯಾಪಾರದ ದೃಷ್ಟಿಯಿಂದ ನಾವು ಪ್ರತಿಭಟನೆ ಮಾಡುತ್ತಿಲ್ಲ. ಜನರ ಸುರಕ್ಷತೆಗಾಗಿ ಈ ಹೋರಾಟ ನಡೆಸುತ್ತಿದ್ದೇವೆ. ಅನೇಕ ಬಾರಿ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಇಂದು ನಮ್ಮ ವ್ಯವಹಾರ ಬಿಟ್ಟು ಪ್ರತಿಭಟನೆಗೆ ಇಳಿದಿದ್ದೇವೆ” ಎಂದು ಅಸೋಸಿಯೇಷನ್ ಪದಾಧಿಕಾರಿಗಳು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article