ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Uttar Kannada: ಭಟ್ಕಳದಲ್ಲಿ ನಕಲಿ ಕ್ಲಿನಿಕ್‌ಗಳ ಮೇಲೆ ಅಧಿಕಾರಿಗಳಿಂದ ದಾಳಿ: ಮೂರು ಕ್ಲಿನಿಕ್  ಸೀಜ್..!

Uttar Kannada: ಭಟ್ಕಳದಲ್ಲಿ ನಕಲಿ ಕ್ಲಿನಿಕ್‌ಗಳ ಮೇಲೆ ಅಧಿಕಾರಿಗಳಿಂದ ದಾಳಿ: ಮೂರು ಕ್ಲಿನಿಕ್ ಸೀಜ್..!

ಭಟ್ಕಳ: ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಭಟ್ಕಳ ಪಟ್ಟಣದಲ್ಲಿ ನಕಲಿ ಕ್ಲಿನಿಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸೋಮವಾರ ಟಿಎಚ್‌ಒ ಡಾ. ಸನಾ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಮೂರು ನಕಲಿ ಕ್ಲಿನಿಕ್‌ಗಳನ್ನು ಸೀಜ್ ಮಾಡಲಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ನೋಡಲ್ ಅಧಿಕಾರಿ, ಆಯುಷ್ ಅಧಿಕಾರಿ, ನಗರ ಠಾಣೆ ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದರು. ತಂಡವು ಭಟ್ಕಳ ಪಟ್ಟಣದ ನಾಲ್ಕು ಕ್ಲಿನಿಕ್‌ಗಳು ಹಾಗೂ ಶಿರಾಲಿಯ ಒಂದು ಕ್ಲಿನಿಕ್‌ನಲ್ಲಿ ಪರಿಶೀಲನೆ ನಡೆಸಿತು.
ಪರಿಶೀಲನೆ ವೇಳೆ ವೈದ್ಯರು ಹೊಂದಿರುವ ಎಂ.ಬಿ.ಬಿ.ಎಸ್, ಬಿ.ಎ.ಎಂ.ಎಸ್, ಬಿ.ಎಚ್‌.ಎಂ.ಎಸ್ ಮತ್ತು ಯುನಾನಿ ಪದವಿಗಳ ಪ್ರಮಾಣಪತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರು ಕ್ಲಿನಿಕ್‌ಗಳನ್ನು ತಕ್ಷಣ ಸೀಜ್ ಮಾಡಲಾಗಿದೆ. ಮದಿನಾ ಕಾಲನಿಯ ಒಂದು ಕ್ಲಿನಿಕ್ ಮಾಲೀಕರು ಸ್ವಯಂವಾಗಿ ಕ್ಲಿನಿಕ್ ಬಂದ್ ಮಾಡಿದ್ದು, ಅವರ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ.
ಈ ಪ್ರಕರಣಗಳ ಕುರಿತು ವರದಿಯನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ರವಾನಿಸಲಾಗಿದ್ದು, ಸಮಗ್ರ ತನಿಖೆಯ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಟಿಎಚ್‌ಒ ಡಾ. ಸನಾ ತಿಳಿಸಿದ್ದಾರೆ.
ಪಟ್ಟಣ ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ಇಂತಹ ದಾಳಿ ಮತ್ತು ಪರಿಶೀಲನೆ ಕಾರ್ಯ ಮುಂದುವರಿಯಲಿದ್ದು, ಸಾರ್ವಜನಿಕರು ಅನಧಿಕೃತ ವೈದ್ಯರಿಂದ ಚಿಕಿತ್ಸೆ ಪಡೆಯಬಾರದು. ಸರ್ಕಾರದಿಂದ ಮಾನ್ಯತೆ ಪಡೆದ ನೋಂದಾಯಿತ ವೈದ್ಯರ ಬಳಿ ಮಾತ್ರ ಚಿಕಿತ್ಸೆ ಪಡೆಯಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

Ads on article

Advertise in articles 1

advertising articles 2

Advertise under the article