ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Udupi ಬೈಂದೂರು: ಜಾನಪದ ಪರಿಷತ್ ಜಿಲ್ಲಾಧ್ಯಕ್ಷ, ಗಾಯಕ ಡಾ. ಗಣೇಶ್ ಗಂಗೊಳ್ಳಿ ನಿಧನ..!

Udupi ಬೈಂದೂರು: ಜಾನಪದ ಪರಿಷತ್ ಜಿಲ್ಲಾಧ್ಯಕ್ಷ, ಗಾಯಕ ಡಾ. ಗಣೇಶ್ ಗಂಗೊಳ್ಳಿ ನಿಧನ..!

ಕುಂದಾಪುರ: ಉಡುಪಿ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ, ಗಾಯಕ,ಆಕಾಶವಾಣಿ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಎಪ್ರಿಲ್ 7 ರಂದು ಮಂಗಳವಾರ ಸಾಸ್ತಾನ ಟೋಲ್ ಗೇಟ್ ಬಳಿ ನಿಧನರಾದರು.
ಡಾ. ಗಣೇಶ್ ಗಂಗೊಳ್ಳಿಯವರು ತಮ್ಮನಾದ ಶ್ರೀಧರ್ ರವರನ್ನು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ನೋಡಿ ಬರುವಾಗ ಸಾಸ್ತಾನ ಟೋಲ್ ಗೇಟ್ ಬಳಿ ಅವರು ಚಲಿಸುತ್ತಿದ್ದ ಕಾರಿನಲ್ಲಿ ಎದೆ ನೋವು ಕಾಣಿಸಿಕೊಂಡಿದ್ದೆ ಎಂದು ಮಾಹಿತಿ ತಿಳಿದು ಬಂದಿದೆ, 
ಹೌದು ತಕ್ಷಣ ಅಸ್ವಸ್ಥಗೊಂಡ ಅವರನ್ನು ಕೂಡಲೇ ಉಡುಪಿ ಹೈಟೆಕ್‌ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ 11:45ಕ್ಕೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಖ್ಯಾತ ಗಾಯಕರಾದ ಅವರು ಆರಂಭದಲ್ಲಿ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಆಕಾಶವಾಣಿ ಕಲಾವಿದರಾದ ಅವರು ಹಲವಾರು ಸಾಹಿತ್ಯ ಸಮ್ಮೇಳನದಲ್ಲಿ ಕುಂದಗನ್ನಡದ ಹಾಡನ್ನು ಹಾಡಿ ರಂಜಿಸುತ್ತಿದ್ದರು.
ಇವರಿಗೆ ಕರ್ನಾಟಕ ಯುವರತ್ನ ಪ್ರಶಸ್ತಿ , ಜಾನಪದ ಅಕಾಡೆಮಿ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ, ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಖ್ಯಾತ ಕಲಾವಿದನ ನಿಧನಕ್ಕೆ ಗಣ್ಯರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.ಸಾಹಿತ್ಯ,ಕಲಾ ಕ್ಷೇತ್ರಕ್ಕೆ ಇವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ.
ನಾಳೆ ಏಪ್ರಿಲ್ 8 ರಂದು ಗಂಗೊಳ್ಳಿ ಗ್ರಾಮದ ಬಾವಿ ಕಟ್ಟೆಯಲ್ಲಿ ಡಾ. 
 ಗಣೇಶ್ ಗಂಗೊಳ್ಳಿ ರವರ ಮೂಲ ತಾಯಿಯ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ 
ಅಂತ್ಯ ಸಂಸ್ಕಾರಕ್ಕೆ ರಾಜಕಾರಣಿಗಳು ಅಧಿಕಾರಿಗಳು ಗಾಯಕರು, ಚಿತ್ರನಟರು, ರಂಗಭೂಮಿ ಕಲಾವಿದರು, ಹಾಗೂ ಯುವ ಪ್ರತಿಭೆಯ ಕಲಾವಿದರು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article