ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Shivamogga  :ಹೊಸನಗರ ತಾಲ್ಲೂಕಿನ ಜನರ ದಶಕಗಳ ಆಶಯವಾದ 'ಹೊಸನಗರ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಗೆ ಹೋರಾಟ..!

Shivamogga :ಹೊಸನಗರ ತಾಲ್ಲೂಕಿನ ಜನರ ದಶಕಗಳ ಆಶಯವಾದ 'ಹೊಸನಗರ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಗೆ ಹೋರಾಟ..!

ಶಿವಮೊಗ್ಗ : ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ವಿವಿಧ ಮಠಾಧೀಶರು, ಹೋರಾಟ ಸಮಿತಿಯ ಪ್ರಮುಖರು ಹಾಗೂ ಸಾವಿರಾರು ಸಾರ್ವಜನಿಕರೊಂದಿಗೆ ಪಾಲ್ಗೊಂಡು ಜನರ ಭಾವನೆಗಳಿಗೆ ಸಾಕ್ಷಿಯಾಗಲಾಯಿತು. ಈ ಪವಿತ್ರ ಹೋರಾಟದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಹೊಸನಗರದ ಸ್ವಾಭಿಮಾನದ ಧ್ವನಿಗೆ ಬೆಂಬಲ ಸೂಚಿಸಲಾಯಿತು.
ಹೊಸನಗರಕ್ಕೆ ತನ್ನದೇ ಆದ ರಾಜಕೀಯ ಅಸ್ಮಿತೆ ಮರಳಿ ಸಿಗಬೇಕು ಎಂಬುದು ಈ ಭಾಗದ ಪ್ರತಿಯೊಬ್ಬರ ಆಶಯವಾಗಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಹಾಗೂ ಕ್ಷೇತ್ರ ಪುನರ್ ವಿಂಗಡಣಾ ಆಯೋಗದ ಮುಂದೆ ಸೂಕ್ತವಾಗಿ ಪ್ರಸ್ತಾವನೆ ಸಲ್ಲಿಸಿ, ನ್ಯಾಯ ಒದಗಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಜನರ ಈ ಒಕ್ಕೊರಲ ಧ್ವನಿಗೆ ನಾವು ಸದಾ ಜೊತೆಯಾಗಿರುತ್ತೇವೆ.
ಈ ಸಂದರ್ಭ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಶ್ರೀ ಮ.ನಿ.ಪ್ರ ಅಭಿನವ ಚನ್ನಬಸವ ಶ್ರೀಗಳು, ಹುಂಚ ಜೈನ ಮಠದ ಶ್ರೀ ಶ್ರೀ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಶ್ರೀಗಳು, ನಾರಾಯಣಗುರು ಸಂಸ್ಥಾನ ಮಠದ ಶ್ರೀ ಶ್ರೀ ರೇಣುಕಾನಂದ ಶ್ರೀಗಳು, ಮುಸ್ಲಿಂ ಧರ್ಮ ಗುರುಗಳು, ಹೋರಾಟದ ರುವಾರಿಗಳು ಮಾಜಿ ಶಾಸಕರಾದ ಶ್ರೀ ಬಿ.ಸ್ವಾಮಿರಾವ್, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪ, ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ, ಶ್ರೀ ಬೇಳೂರು ಗೋಪಾಲ ಕೃಷ್ಣ, ಮಾಜಿ ಸಚಿವರಾದ ಶ್ರೀ ಹರತಾಳು ಹಾಲಪ್ಪ, ಶ್ರೀ ವೀರೇಶ್ ಆಲವಳ್ಳಿ, ಶ್ರೀ ಕಲಗೋಡು ರತ್ನಾಕರ್, ಶ್ರೀ ಎನ್ ಆರ್ ದೇವಾನಂದ್, ಶ್ರೀ ವರ್ತೆಶ್, ಶ್ರೀ ಆರ್. ಚಾಬುಸಾಬ್ ಶ್ರೀ ಬಿ ಜಿ ಚಂದ್ರಮೌಳಿ, ಶ್ರೀಬಂಡಿ ರಾಮಚಂದ್ರ ಹಾಗೂ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article