ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapur ಸಾರ್ವಜನಿಕ ಸ್ಥಳದಲ್ಲಿ ಯುವಕರ ಮಾರಾಮಾರಿ : ಇಬ್ಬರು ಪೊಲೀಸ್ ವಶಕ್ಕೆ

Kundapur ಸಾರ್ವಜನಿಕ ಸ್ಥಳದಲ್ಲಿ ಯುವಕರ ಮಾರಾಮಾರಿ : ಇಬ್ಬರು ಪೊಲೀಸ್ ವಶಕ್ಕೆ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯುವಕರು ಪರಸ್ಪರ ಜಗಳವಾಡಿ ಶಾಂತಿಗೆ ಭಂಗ ಉಂಟುಮಾಡಿದ ಘಟನೆ ನಡೆದಿದೆ.
ಎ.21ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ನಿರಂಜನ ಗೌಡ ಬಿ.ಎಸ್‌. ಅವರು ರಾತ್ರಿ ಸುಮಾರು 11:30 ಗಂಟೆಗೆ ಹಟ್ಟಿಯಂಗಡಿ ಗ್ರಾಮದ ಮಾರಲಾ ದೇವಿ ದೇವಸ್ಥಾನದ ಬಸ್‌ ನಿಲ್ದಾಣದಲ್ಲು ಬಳಿ ಕೆಲ ಯುವಕರು ಏರುದನಿಯಲ್ಲಿ ಮಾತನಾಡುತ್ತ ಪರಸ್ಪರ ಹೊಡೆದು ಜಗಳವಾಡುತ್ತಿರುವುದನ್ನು ಗಮನಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ 7 ಮಂದಿ ಯುವಕರು ಓಡಿ ಹೋಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜ್ವಲ್‌ (19) ಮತ್ತು ಅಭಿಷೇಕ್‌ (24) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಯುವಕರು ಮಾತಿಗೆ ಮಾತು ಬೆಳೆಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ರೀತಿಯಲ್ಲಿ ಜಗಳವಾಡುತ್ತಿದ್ದ ಹಿನ್ನೆಲೆಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article