ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura ವಿಮಾನದ ಹಾರಾಟ ಆತಂಕಕ್ಕೆ ಕಾರಣ | ಸ್ಪಷ್ಟ ಮಾಹಿತಿ ಇಲ್ಲದೆ ಸ್ಥಳೀಯರಲ್ಲಿ ಗೊಂದಲ |

Kundapura ವಿಮಾನದ ಹಾರಾಟ ಆತಂಕಕ್ಕೆ ಕಾರಣ | ಸ್ಪಷ್ಟ ಮಾಹಿತಿ ಇಲ್ಲದೆ ಸ್ಥಳೀಯರಲ್ಲಿ ಗೊಂದಲ |

ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ಬೈಂದೂರು ಕೋಟ, ಸೈಬರ್ ಕಟ್ಟೆ, ಸಾಲಿಗ್ರಾಮ ಮತ್ತು ಸಾಸ್ತಾನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಬಿಳಿ ಬಣ್ಣದ ಲಘು ವಿಮಾನ ಹಾರಾಟ ನಡೆಸುತ್ತಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ವಿಶೇಷವಾಗಿ ಜಾಗತಿಕ ಮಟ್ಟದಲ್ಲಿ ಯುದ್ಧಗಳ ಸುದ್ದಿ ಹರಿದಾಡುತ್ತಿರುವ ಸಂದರ್ಭದಲ್ಲಿ ಈ ಘಟನೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ವಿಮಾನ ಹಾರಾಟದ ಕುರಿತು ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದೇ ಪರಿಸರದಲ್ಲಿ ಪುನಃಪುನಃ ಒಂದು ತುದಿಯಿಂದ ಮತ್ತೊಂದು ತುದಿಗೆ ಹಾರಾಟ ನಡೆಸುತ್ತಿರುವುದು ಜನರಲ್ಲಿ ಅನುಮಾನ ಮೂಡಿಸಿದೆ.
ಮಧ್ಯಾಹ್ನ ವೇಳೆಯಲ್ಲಿ ಅತಿ ಕೆಳಮಟ್ಟದಲ್ಲಿ ಹಾರುತ್ತಿರುವ ಈ ಲಘು ವಿಮಾನವನ್ನು ಸ್ಥಳೀಯರು ಗಮನಿಸಿದ್ದಾರೆ. ಸಾಮಾನ್ಯ ವಿಮಾನ ಹಾರಾಟಕ್ಕಿಂತ ಭಿನ್ನವಾಗಿ ಕಂಡಿರುವುದರಿಂದ ಜನರು ಎಚ್ಚರಿಕೆಯಿಂದಿದ್ದಾರೆ.

ಸ್ಥಳೀಯರು ಈ ವಿಮಾನದ ಹಾರಾಟದ ದೃಶ್ಯಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಯುದ್ಧಸನ್ನಿವೇಶದ ಸುದ್ದಿಗಳ ನಡುವೆ ಈ ವಿಡಿಯೋಗಳು ಇನ್ನಷ್ಟು ಚರ್ಚೆಗೆ ಕಾರಣವಾಗಿವೆ.

ಇನ್ನಷ್ಟೇ ಇದರ ಬಗ್ಗೆ ಜಿಲ್ಲಾಡಳಿತ ಕಡೆಯಿಂದ ಮಾಹಿತಿ ತಿಳಿಯಬೇಕಾಗಿದೆ

Ads on article

Advertise in articles 1

advertising articles 2

Advertise under the article