kundapur :11ವರ್ಷದ ಬಾಲಕನ ಪ್ರಚೋದನಕಾರಿ ಘೋಷಣೆಯ ವಿಡಿಯೋ ವೈರಲ್
Monday, February 23, 2026
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೇರ್ ಡ್ರೆಸ್ ಅಂಗಡಿಯೊಂದರಲ್ಲಿ ಬಿಹಾರ ಮೂಲದ 11 ವರ್ಷದ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆ ಕೂಗುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುತ್ತದೆ.
ಸದರಿ ವಿಷಯದ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿರುವುದರಿಂದ ಈ ವಿಡಿಯೋವನ್ನು ಸಾರ್ವಜನಿಕರು ಶೇರ್ ಮಾಡುವುದಾಗಲಿ ಅಥವಾ ಪೋಸ್ಟ್ ಮಾಡುವುದಾಗಲಿ ಮಾಡಬಾರದು, ಒಂದು ವೇಳೆ ಶೇರ್ ಮಾಡಿದ್ದಲ್ಲಿ ಅವರ ವಿರುದ್ಧ IT ACT, Juvenile Justice ACT, BNS ACT ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.